ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026 (FIFA World Cup Final) ಮಹಾಸಮರದಲ್ಲಿ ಅರ್ಜೆಂಟೀನಾವನ್ನು ಮಣಿಸಿ ಸ್ಪೇನ್ (Spain) ತಂಡ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿ ಕೋಟಿ ಕೋಟಿ ರೂ.ಗಳನ್ನು ಬಾಚಿಕೊಂಡಿದೆ.
ಈ ವಿಶ್ವಕಪ್‌ಗಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (FIFA) ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ನಗದು ಬಹುಮಾನವನ್ನು (Prize Money) ಪ್ರಕಟಿಸಿತ್ತು.
ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಿದ 48 ತಂಡಗಳಿಗೆ ಒಟ್ಟು ₹5,400 ಕೋಟಿಗೂ ಅಧಿಕ (655 ಮಿಲಿಯನ್ ಡಾಲರ್) ನಗದು ಬಹುಮಾನವನ್ನು ಹಂಚಲಾಗಿದೆ. ಭಾರತೀಯ ರೂಪಾಯಿಗಳಲ್ಲಿ ಪ್ರತಿ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತದ ವಿವರ ಇಲ್ಲಿದೆ:
ಚಾಂಪಿಯನ್ (ಸ್ಪೇನ್)
ವಿಶ್ವಕಪ್ ಎತ್ತಿಹಿಡಿದ ಸ್ಪೇನ್ ತಂಡಕ್ಕೆ ಬರೋಬ್ಬರಿ 482 ಕೋಟಿ ರೂ. (50 ಮಿಲಿಯನ್ ಡಾಲರ್) ನಗದು ಬಹುಮಾನ ಸಿಕ್ಕಿದೆ.

ರನ್ನರ್-ಅಪ್ (ಅರ್ಜೆಂಟೀನಾ )
ಫೈನಲ್‌ನಲ್ಲಿ ಸೋತು ದ್ವಿತೀಯ ಸ್ಥಾನ ಪಡೆದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಕ್ಕೆ 317 ಕೋಟಿ ರೂ. (33 ಮಿಲಿಯನ್ ಡಾಲರ್) ಒಲಿದಿದೆ. ಇದನ್ನೂ ಓದಿ: ಫೈನಲ್ ಬಳಿಕ ಮೈದಾನದಲ್ಲೇ ಕಿತ್ತಾಟ – ಸ್ಪೇನ್ ಆಟಗಾರನ ಕುತ್ತಿಗೆ ಹಿಡಿದ ಪರೆಡೆಸ್‌ಗೆ ರೆಡ್ ಕಾರ್ಡ್
ಮೂರನೇ ಸ್ಥಾನ (ಇಂಗ್ಲೆಂಡ್)
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ತಂಡಕ್ಕೆ 272 ಕೋಟಿ(29 ಮಿಲಿಯನ್ ಡಾಲರ್) ಲಭಿಸಿದೆ.
ನಾಲ್ಕನೇ ಸ್ಥಾನ (ಫ್ರಾನ್ಸ್)
ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಫ್ರಾನ್ಸ್ ತಂಡಕ್ಕೆ 259 ಕೋಟಿ (25 ಮಿಲಿಯನ್ ಡಾಲರ್) ಸಿಕ್ಕಿದೆ.

ಕ್ವಾರ್ಟರ್ ಫೈನಲಿಸ್ಟ್‌ಗಳು (5ರಿಂದ 8ನೇ ಸ್ಥಾನ): ತಲಾ 182 ಕೋಟಿ (19 ಮಿಲಿಯನ್ ಡಾಲರ್)
ರೌಂಡ್ ಆಫ್ 16 – ತಲಾ 144 ಕೋಟಿ (15 ಮಿಲಿಯನ್ ಡಾಲರ್)
ರೌಂಡ್ ಆಫ್ 32 – ತಲಾ 83 ಕೋಟಿ (10 ಮಿಲಿಯನ್ ಡಾಲರ್)
ಗ್ರೂಪ್ ಹಂತದಲ್ಲೇ ನಿರ್ಗಮಿಸಿದ ತಂಡಗಳು: ತಲಾ 75 ಕೋಟಿ (9 ಮಿಲಿಯನ್ ಡಾಲರ್) ಇದನ್ನೂ ಓದಿ: FIFA World Cup Award Winners: ಸ್ಪೇನ್ ಆಟಗಾರರ ಮಿಂಚು; ಎಂಬಾಪೆಗೆ ಗೋಲ್ಡನ್ ಬೂಟ್!
ಟೂರ್ನಿಗೆ ಅರ್ಹತೆ ಪಡೆದ ಪ್ರತಿಯೊಂದು ತಂಡಕ್ಕೂ ಪಂದ್ಯಾವಳಿಯ ತಯಾರಿಗಾಗಿ (Preparation Fee) ಫಿಫಾ ಹೆಚ್ಚುವರಿಯಾಗಿ ತಲಾ 12.5 ಕೋಟಿ ರೂ. (1.5 ಮಿಲಿಯನ್ ಡಾಲರ್) ನೀಡಿದೆ.
