ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ರೋಚಕ ಫೈನಲ್(FIFA World Cup Final) ಪಂದ್ಯದಲ್ಲಿ ಸ್ಪೇನ್(Spain) ವಿರುದ್ಧ 1-0 ಗೋಲಿನಿಂದ ಅರ್ಜೆಂಟೀನಾ(Argentina) ಸೋಲನುಭವಿಸಿದ ಬೆನ್ನಲ್ಲೇ ಮೈದಾನದಲ್ಲಿ ಆಟಗಾರರ ಮಧ್ಯೆ ಹೊಡೆದಾಟ ನಡೆದಿದೆ.
ಪಂದ್ಯದ ಅಂತಿಮ ವಿಸಿಲ್ (Final Whistle) ಊದಿದ ತಕ್ಷಣವೇ ಲಿಯೋನೆಲ್ ಮೆಸ್ಸಿಯ ಆಪ್ತ ಸಹಪಾಠಿ ಹಾಗೂ ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೆಡೆಸ್ (Leandro Paredes) ಅವರು ಸ್ಪೇನ್ ಆಟಗಾರರ ಮೇಲೆ ಹಲ್ಲೆ ನಡೆಸಿದ್ದು, ರೆಫರಿ ಅವರಿಗೆ ಪಂದ್ಯ ಮುಗಿದ ಬಳಿಕ ನೇರ ಕೆಂಪು ಕಾರ್ಡ್ (Red Card) ತೋರಿಸಿ ಮೈದಾನದಿಂದ ಹೊರಹಾಕಿದ್ದಾರೆ.
ಪಂದ್ಯ ಮುಗಿದು ಸ್ಪೇನ್ ಆಟಗಾರರು ವಿಶ್ವಕಪ್ ಜಯದ ಸಂಭ್ರಮಾಚರಣೆಯಲ್ಲಿದ್ದಾಗ, ಕೋಪಗೊಂಡ ಲಿಯಾಂಡ್ರೊ ಪರೆಡೆಸ್ ಸ್ಪೇನ್‌ನ ಡಿಫೆಂಡರ್ ಎರಿಕ್ ಗಾರ್ಸಿಯಾ (Eric Garcia) ಅವರ ಬಳಿ ಧಾವಿಸಿ, ಅವರ ಕುತ್ತಿಗೆಯನ್ನು ಬಲವಂತವಾಗಿ ಹಿಡಿದು ನೆಲಕ್ಕೆ ತಳ್ಳಿದರು. ಇದನ್ನೂ ಓದಿ: FIFA World Cup Award Winners: ಸ್ಪೇನ್ ಆಟಗಾರರ ಮಿಂಚು; ಎಂಬಾಪೆಗೆ ಗೋಲ್ಡನ್ ಬೂಟ್!
LA PELEA DEL FINAL 🇦🇷🇪🇸
▶ Leandro Paredes fue a buscar los jugadores de España en el final del partido
🎥 _jsm44 pic.twitter.com/C3xbxhS1pP
— Diario Olé (@DiarioOle) July 19, 2026
ಗಾರ್ಸಿಯಾ ಬೆಂಬಲಕ್ಕೆ ಬಂದ ಸ್ಪೇನ್‌ನ 21 ವರ್ಷದ ಯುವ ಆಟಗಾರ ಗಾವಿ (Gavi) ಅವರೊಂದಿಗೂ ಪರೆಡೆಸ್ ಜಗಳ ಮಾಡಿದ್ದಾರೆ. ಅವರ ಜರ್ಸಿ ಹಿಡಿದು ಎಳೆದ ಪರೆಡೆಸ್, ಗಾವಿಯನ್ನೂ ನೆಲಕ್ಕೆ ತಳ್ಳಿ ಮುಖಕ್ಕೆ ಕೈಯಿಂದ ಹೊಡೆದಿದ್ದಾರೆ.
ಗಲಾಟೆಯನ್ನು ತಡೆಯಲು ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ ಹಾಗೂ ಸ್ಪೇನ್ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು. ಮೈದಾನದಲ್ಲಿ ನಡೆದ ಈ ಸಂಪೂರ್ಣ ಗಲಾಟೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ಇದನ್ನೂ ಓದಿ: FIFA World Cup Final| ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ವಿಶ್ವ ಫುಟ್‌ಬಾಲ್ ಕಿರೀಟ
Look at this thug.
Leandro Paredes should be banned for a long time.
Can’t handle his team produced the worse World Cup final performance in history.
What a sore loser pic.twitter.com/AFp7ToQMmm
— Red Army 68′ 🇾🇪 (@MUFC_RA) July 19, 2026
2ನೇ ರೆಡ್ ಕಾರ್ಡ್:
ಪಂದ್ಯದ 93ನೇ ನಿಮಿಷದಲ್ಲೇ ಅರ್ಜೆಂಟೀನಾದ ಪ್ರಮುಖ ಮಿಡ್‌ಫೀಲ್ಡರ್ ಎನ್ಝೋ ಫೆರ್ನಾಂಡೀಸ್ ಕೆಂಪು ಕಾರ್ಡ್ ಪಡೆದು ಹೊರಬಿದ್ದಿದ್ದರು. ಪಂದ್ಯ ಮುಗಿದ ಬಳಿಕ ಪರೆಡೆಸ್‌ಗೆ ರೆಡ್ ಕಾರ್ಡ್ ಸಿಕ್ಕಿದ್ದರಿಂದ, ಒಂದೇ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಇಬ್ಬರು ಆಟಗಾರರು ಕೆಂಪು ಕಾರ್ಡ್ ಪಡೆದಂತಾಯಿತು.
ಮೆಸ್ಸಿ ಅವರ ಆಟಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಆಟಗಾರರೇ ಈ ರೀತಿ ಅಸಿಸ್ತಿನ ವರ್ತನೆ ತೋರಿದ್ದಕ್ಕೆ ಫುಟ್‌ಬಾಲ್ ದಿಗ್ಗಜರು ಹಾಗೂ ಕ್ರೀಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
