ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ 8 ಲಕ್ಷ ದಂಡ

Public TV
1 Min Read
DOG

ಮುಂಬೈ: ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆಗೆ 8 ಲಕ್ಷ ರೂ. ದಂಡ ಹಾಕಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.

ಬೀದಿನಾಯಿಗಳಿಗೆ ಹೌಸಿಂಗ್ ಕಾಲೋನಿ ಆವರಣದಲ್ಲಿ ಆಹಾರ ನೀಡಿದ್ಧಕ್ಕೆ ಮುಂಬೈ ಮಹಿಳೆಗೆ 8 ಲಕ್ಷ ರೂಪಾಯಿ ದಂಡವನ್ನು ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘ ವಿಧಿಸಿದೆ. 40ಕ್ಕೂ ಹೆಚ್ಚು ಕಟ್ಟಡಗಳಿರುವ NRI ಅಪಾರ್ಟ್‍ಮೆಂಟ್ ಇದಾಗಿದೆ. ಇಲ್ಲಿ ವಾಸಿಸುವ ಆಂಶು ಸಿಂಗ್, ಕಾಲೋನಿ ಆವರಣದಲ್ಲಿ ಬೀದಿನಾಯಿಗಳು ಆಶ್ರಯ ಸಿದ್ದವು.ಈ  ಶ್ವಾನಗಳಿಗೆ ಆಹಾರ ನೀಡಿ ಭಾರಿ ಮೊತ್ತದ ದಂಡವನ್ನು ಕಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಘೋರ ಅಪರಾಧ, ಅದಕ್ಕೆ ಪೂರ್ಣ ವಿರಾಮ ಹಾಕಿ – ರಮೇಶ್ ಕುಮಾರ್ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ

DOG

ಜಲೈ 2021ರಿಂದ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದೆ. ಈ ಕಾರಣಕ್ಕಾಗಿ ನನಗೆ ಪ್ರತಿ ದಿನಕ್ಕೆ 5000ರೂಪಾಯಿಗಳಂತೆ ಈ ವರೆಗೆ ಒಟ್ಟು 8 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನೊಬ್ಬ ನಿವಾಸಿಗೆ ಆರು ಲಕ್ಷ ದಂಡ ವಿಧಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೀದಿನಾಯಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತಿರುವ ಕಾರಣ ದಂಡ ವಿಧಿಸಲಾಗಿದೆ ಎಂದು ಸಂಘ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ

street dog

ನಿವಾಸಿ ಲೀಲಾ ವರ್ಮಾ ಖಾಸಗಿವಾಹಿನಿಯವರೊಂದಿಗೆ ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ನಂತರ ದಂಡವನ್ನು ಲೆಕ್ಕಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಮಕ್ಕಳು ಟ್ಯೂಷನ್‍ಗೆ ಹೋಗುವಾಗ ಬೀದಿನಾಯಿಗಳು ಹಿಂದೆ ಓಡಿಬರುತ್ತವೆ. ಪೋಷಕರು ಆತಂಕಗೊಂಡಿದ್ದಾರೆ. ಬೀದಿನಾಯಿಗಳಿಂದಾಗಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಅವುಗಳ ಶಬ್ಧದಿಂದಾಗಿ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎಂದು ವಸತಿ ಸಮುಚ್ಚಯ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *