BelgaumDistrictsKarnatakaLatestMain Post

ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ

ಬೆಳಗಾವಿ: ವಿಧಾನಸಭೆಯಲ್ಲಿ ಸೂಕ್ಷ್ಮತೆ ಕಳೆದುಕೊಂಡು ಅಗೌರವದಿಂದ ವಿವಾದಾತ್ಮಕ ಮಾತನಾಡಿದ್ದ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಕ್ಷಮೆ ಕೇಳಿದ್ದಾರೆ.

ದೇಶದ ಎಲ್ಲ ಕಡೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ರಮೇಶ್ ಕುಮಾರ್ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಲು ಮುಂದಾದ್ರು. ಸ್ಪೀಕರ್ ಅನುಮತಿ ಪಡೆದಿದ್ದೇನೆ ಅಂತಾ ಮಾತು ಶುರು ಮಾಡಿದ ರಮೇಶ್ ಕುಮಾರ್, ಹೆಣ್ಣಿಗೆ ಅಪಮಾನ ಮಾಡುವುದು, ಸದನದ ಗೌರವ ಕಡಿಮೆ ಮಾಡುವುದು, ಲಘುವಾಗಿ ವರ್ತಿಸುವ ಉದ್ದೇಶ ಇಲ್ಲ. ಮಾತನಾಡಿದ ಸಂದರ್ಭದ ಬಗ್ಗೆ ಸಮರ್ಥನೆ ಮಾಡಲ್ಲ. ನಾನು ಉಲ್ಲೇಖ ಮಾಡಿದ ಮಾತು ಯಾರಿಗೂ ನೋವಾಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು, ಸದನದ ಗೌರವದಲ್ಲಿ ನಡೆದುಕೊಳ್ಳಬೇಕು ಎಂಬ ಪ್ರಯತ್ನ ಮಾಡುತ್ತೇನೆ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ, ನೀವು ನಗಾಡಿದ್ದೀರಿ, ನಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ, ನಿಮ್ಮದೂ ಆ ಉದ್ದೇಶ ಇರಲಿಕ್ಕಿಲ್ಲ ಎಂದು ಸ್ಪೀಕರ್ ಕಾಗೇರಿ ಅವರನ್ನು ಜೊತೆ ಸೇರಿಸಿಕೊಂಡು ಸ್ಪಷ್ಟನೆ ಕೊಟ್ಟರು. ಇದನ್ನೂ ಓದಿ: ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್

ನಿನ್ನೆ ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನು ಅನುಭವಿಸ್ತಿದ್ದೇನೆ ಎಂದು ನೋವು ತೋಡಿಕೊಂಡೆ ನಾನು ಇಂಗ್ಲಿಷ್ ಭಾಷೆಯಲ್ಲಿರುವ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು, ಲಘುವಾಗಿ ವರ್ತಿಸಬೇಕು ಎನ್ನುವ ಯಾವುದೇ ದುರುದ್ದೇಶ ಇಲ್ಲ. ಯಾವ ಸನ್ನಿವೇಶದಲ್ಲಿ ಹೇಗೆ ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ಸಂದರ್ಭದಲ್ಲಿ ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿದ ಮಾತು. ಯಾರ ಮೇಲೂ ಚಾಲೆಂಜ್ ಮಾಡುವ ಉದ್ದೇಶ ಇಲ್ಲ. ಸ್ಪೀಕರ್ ಅವರೇ ತಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ. ಚಿಂತಕ ಕನ್ಫೂಶಿಯಸ್ ಒಂದು ಮಾತು ಹೇಳ್ತಾನೆ. One mistake, ends up in a single mistake.. To Deny mistake, about multiple mistakes ಅಂತಾ ಹೇಳ್ತಾನೆ. ನನ್ನಿಂದ ಅಪರಾಧ ಆಗಿದೆ ಅಂತಾ ತೀರ್ಪನ್ನೇ ಕೊಟ್ಟಿರೋದ್ರಿಂದ, ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಇಲ್ಲೇ ಸುಖಾಂತ್ಯವನ್ನು ಹಾಡಿ, ಕಲಾಪ ಮುಂದುವರೆಸೋಣ. ಗ್ರಹಚಾರಕ್ಕೆ, ನೀವು ಹೇಳಿದ ಹಾಗೆ ನಾನು ಪ್ರತಿಕ್ರಿಯಿಸಿದೆ ಎಂದು ರಮೇಶ್ ಕುಮಾರ್ ಕ್ಷಮೆ ಕೇಳಿದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

ರಮೇಶ್ ಕುಮಾರ್ ಕ್ಷಮೆ ಬಳಿಕ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಾದವನ್ನ ಬೆಳಸಬೇಡಿ, ಸಾಂದರ್ಭಿಕವಾಗಿ ಹೇಳಿದ್ದುಅಷ್ಟೇ. ನಮ್ಮ ಸದನ ಮಹಿಳೆಯರ ಬಗ್ಗೆ ಗೌರವವನ್ನು ಇಟ್ಟುಕೊಂಡಿದೆ. ನಾವೆಲ್ಲರೂ ಕುಟುಂಬದಲ್ಲಿ ಇರುವವವರು. ಇದನ್ನು ಬೆಳೆಸೋದು ಬೇಡ, ಈಗ ಆಯಿತು. ಈಗಾಗಲೇ ರಮೇಶ್ ಕುಮಾರ್ ಕ್ಷಮೆ ಕೇಳಿ ವಿಷಾದ ವ್ಯಕ್ತಪಡಿಸಿ ಆಗಿದೆ. ನಿನ್ನೆ ನಾನು ಹೇಳಿದ ಮಾತಿಗೆ ರಮೇಶ್ ಕುಮಾರ್ ಒಂದು ಮಾತು ಹೇಳಿದರು. ನಮ್ಮ ಸದನ ಮಹಿಳೆಯರ ಬಗ್ಗೆ ಇರುವ ಸ್ಥಾನವನ್ನು ಇಟ್ಟುಕೊಂಡಂತವರೇ. ವಿವಾದದ ಘಟನೆಯನ್ನು ಬೆಳೆಸುವುದು ಬೇಡ ಕಲಾಪ ಮುಂದುವರಿಸೋಣ. ಇದನ್ನು ಇನ್ನು ಎಲ್ಲೂ ಯಾರೂ ಹೇಳುವುದು ಬೇಡ ಎಂದು ಸ್ಪೀಕರ್ ಹೇಳಿದರು. ಇದೇ ವೇಳೆ ಕೆಲ ಮಹಿಳಾ ಶಾಸಕಿಯರ ಮಾತನಾಡಲು ಪ್ರಯತ್ನಿಸಿದಾಗ ಅವಕಾಶ ಕೊಡದ ಸ್ಪೀಕರ್ ಪ್ರಶ್ನೋತ್ತರ ಕಲಾಪ ಆರಂಭಿಸಿಯೇ ಬಿಟ್ಟರು.

Leave a Reply

Your email address will not be published.

Back to top button