ವಿಜಯಪುರ: ಮಗನಿಗೆ ಮೋಸ ಮಾಡಿ ತಂದೆಯೇ ಸೊಸೆಯ ಜೊತೆಗೆ ಸರಸ ಸಲ್ಲಾಪ ನಡೆಸುತ್ತಿದ್ದನು. ಈ ಬಗ್ಗೆ ತಿಳಿದು ಪತ್ನಿ ಹಾಗೂ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ಡಬಲ್ ಮರ್ಡರ್ ನಡೆದಿದೆ. ಪುಟ್ಟಣ್ಣ ಕೊಲೆ ಮಾಡಿದ ಆರೋಪಿಯಾಗಿದ್ದು, ಕೊಲೆಯಾದವರನ್ನು ತಂದೆ ಮಾಳಪ್ಪ ಪೂಜಾರಿ(65) ಹಾಗೂ ಪತ್ನಿ ರೇಣುಕಾ ಪೂಜಾರಿ(35) ಎಂದು ಗುರುತಿಸಲಾಗಿದೆ.
Advertisement
Advertisement
ಮಾಳಪ್ಪ, ರೇಣುಕಾ ಹಾಗೂ ಪುಟ್ಟಣ್ಣ ಮೂಲತಃ ಇಂಡಿ ತಾಲೂಕಿನ ಶಿರಗೂರ ಗ್ರಾಮದ ನಿವಾಸಿಗಳು. ಹೊಟ್ಟೆಪಾಡಿಗಾಗಿ ಖೇಡಗಿಯ ಶ್ರೀಶೈಲ ಸೊನ್ನ ಅವರ ಜಮೀನಿನಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಸ್ವಂತ ಮಗನ ಪತ್ನಿಯ ಜೊತೆಗೆ ತಂದೆ ಸಂಬಂಧವಿಟ್ಟುಕೊಂಡು ಮಗನಿಗೆ ಗೊತ್ತಾಗದ ಹಾಗೆ ಇಬ್ಬರು ಸರಸವಾಡುತ್ತಿದ್ದರು.
Advertisement
ತಂದೆ ಹಾಗೂ ಪತ್ನಿಯ ಕಳ್ಳಾಟ ತಿಳಿದ ಪುಟ್ಟಣ್ಣ ಕೋಪಗೊಂಡು ಮನೆಗೆ ಬಂದು ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ತೋಟದ ಮನೆಯ ಎದುರು ಹೆಣವಾಗಿ ಬಿದ್ದಿದ್ದ ರೇಣುಕಾ ಹಾಗೂ ಮಾಳಪ್ಪನನ್ನು ನೋಡಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.