ಚಂಡೀಗಢ: ಹರಿಯಾಣದ (Hariyana) ಕರ್ನಾಲ್ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಬಿಟ್ಟು, 5 ಮಕ್ಕಳ ತಾಯಿಯಾಗಿದ್ದ ತನ್ನ ಅತ್ತಿಗೆಯೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ (Hariyana Police Station) ದೂರು ದಾಖಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೂಲತಃ ಉತ್ತರ ಪ್ರದೇಶದ ಫರೂಕಾಬಾದ್ ನಿವಾಸಿ ಸಲೀಂ ತನ್ನ ಅತ್ತಿಗೆಯೊಂದಿಗೆ ಪರಾರಿಯಾದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂಬಂಧಿಕರೇ ಬೆಚ್ಚಿಬಿದ್ದಿದ್ದಾರೆ. ಅತ್ತಿಗೆಗೆ 5 ಮಕ್ಕಳಿದ್ದಾರೆ. ನಾಲ್ಕು ಮಕ್ಕಳ ತಂದೆಯಾಗಿರುವ ಸಲೀಂ ಹೆಂಡತಿ ಈಗ 5ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗ್ಯಾರಂಟಿಗಳ ಪ್ರತಿ ಪೈಸೆಯೂ ನಿಮ್ಮ ಬದುಕಿಗೆ ಸದುಪಯೋಗವಾಗಬೇಕು: ಸಿದ್ದರಾಮಯ್ಯ
5ನೇ ಬಾರಿಗೆ ಆರೋಪಿ ಪತ್ನಿ ಗರ್ಭಿಣಿ: ಆರೋಪಿ (Accused) ಸಲೀಂ ಮೂಲತಃ ಉತ್ತರ ಪ್ರದೇಶದ ಫರೂಕಾಬಾದ್ ನಿವಾಸಿಯಾಗಿದ್ದರೂ ಕರ್ನಾಲ್ನ ಘರೌಂಡಾದ ಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಈಗಾಗಲೇ ದಂಪತಿಗೆ ನಾಲ್ಕು ಮಕ್ಕಳಿದ್ದರು. ಸಲೀಂ ತನ್ನ ಪತ್ನಿ 5ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆಂದು ಆಕೆಯನ್ನು ನೋಡಿಕೊಳ್ಳಲು ಅತ್ತಿಗೆಯನ್ನು ಕರೆದುಕೊಂಡು ಬರಲು ಹೋಗಿದ್ದ. ತುಂಬಾ ಬಲವಂತ ಮಾಡಿದ್ದರಿಂದ ಆಕೆಯನ್ನ ಸೋದರ ಮಾವನೊಂದಿಗೆ ಕಳುಹಿಸಿದ್ದರು.
ಸಲೀಂ ಮತ್ತು ಆತನ ಅತ್ತಿಗೆ ನಡುವೆ ಕೆಲ ದಿನಗಳಲ್ಲೇ ಪ್ರೀತಿ ಶುರುವಾಗಿದೆ. ಆದ್ರೆ ಈ ಬಗ್ಗೆ ಯಾರಿಗೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಅವರಿಬ್ಬರು ಪರಾರಿಯಾದ ಬಳಿಕವೇ ಸತ್ಯ ಬಯಲಾಗಿದೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್
ಸದ್ಯ ಸಲೀಂ ಪತ್ನಿ ಮತ್ತು ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ