CrimeLatestMain PostNational

ಮದುವೆಗೆ ಅವಸರ ಮಾಡಿದ ಮಗನನ್ನು ಕೊಂದೇ ಬಿಟ್ಟ ತಂದೆ!

Advertisements

ಚೆನ್ನೈ: ಮದುವೆ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ನಡೆದ ಗಲಾಟೆ ತಾರಕಕ್ಕೇರಿ ಪುತ್ರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಶಿವಮಣಿ(30) ತಂದೆಯಿಂದಲೇ ಕೊಲೆಯಾದ ಯುವಕ. ಪಾನಮತ್ತರಾಗಿದ್ದ ತಂದೆ-ಮಗ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿದೆ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.

ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಮನೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ಶಿವಮಣಿ ಕ್ಯಾತೆ ತೆಗೆದಿದ್ದಾನೆ. ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ವೇಳೆ ಸ್ಫೋಟ- ಓರ್ವ ಸಾವು, ನಾಲ್ವರು ಗಂಭೀರ

ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ತಂದೆ ತನ್ನ ಮಗನಿಗೆ ಚಾಕುವಿನಿಂದ ಇರಿದುಬಿಟ್ಟಿದ್ದಾರೆ. ಪರಿಣಾಮ ಶಿವಮಣಿ ಸ್ಥಳದಲ್ಲಿಯೇ ಮೃರತಪಟ್ಟಿದ್ದಾನೆ.

ಘಟನೆಯ ಬಳಿಕ ತಂದೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Back to top button