ಕೌಟುಂಬಿಕ ಕಲಹ – ಮಕ್ಕಳ ಕತ್ತು ಸೀಳಿ ಕೊಲೆಗೈದ ಪಾಪಿ ತಂದೆ

Public TV
2 Min Read
MURDER 2

– ಪತ್ನಿಯ ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ

ಮಂಡ್ಯ: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಪಾಪಿ ತಂದೆ ಇಬ್ಬರು ಪುಟ್ಟ ಮಕ್ಕಳ ಕುತ್ತಿಗೆ ಸೀಳಿ ಕೊಲೆ (Murder) ಮಾಡಿದ್ದು, ತನ್ನ ಮಡದಿಗೂ (Wife) ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಜರುಗಿದೆ.

ಆದರ್ಶ (4) ಹಾಗೂ ಅಮೂಲ್ಯ (2) ತಂದೆಯಿಂದ ಕೊಲೆಯಾದ ದುರ್ದೈವಿ ಮಕ್ಕಳು. ಶ್ರೀಕಾಂತ್ ತನ್ನ ಇಬ್ಬರು ಮಕ್ಕಳನ್ನು ಕೊಂದು ತನ್ನ ಪತ್ನಿ ಲಕ್ಷ್ಮಿಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಶ್ರೀಕಾಂತ್ ಗುಲ್ಬರ್ಗ (Gulbarga) ಜಿಲ್ಲೆಯ ಗಾಣಗಪುರ ಗ್ರಾಮದವನಾಗಿದ್ದು, ಲಕ್ಷ್ಮಿಯನ್ನು ವರಿಸಿ 6 ವರ್ಷಗಳಾಗಿತ್ತು. ಮದುವೆಯಾದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆಯಾಗುತ್ತಿತ್ತು. ಬುಧವಾರ ಶ್ರೀಕಾಂತ್ ತನ್ನ ತಂದೆ, ತಾಯಿ ಜೊತೆ ಗಲಾಟೆ ಮಾಡಿಕೊಂಡು ಶ್ರೀರಂಗಪಟ್ಟಣ (Srirangapatna) ಸಮೀಪದ ಮರಳಗಾಲ ಗ್ರಾಮದ ವಿರುಪಾಕ್ಷ ಎಂಬವರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅತ್ತೆ-ಮಾವನ ಮನೆಗೆ ಬಂದಿದ್ದಾರೆ. ಬಳಿಕ ಇಲ್ಲೇ ಒಂದು ಕೆಲಸ ಕೊಡಿಸಿ ನಾವು ಇಲ್ಲಿಯೇ ಇರುತ್ತೇವೆ ಎಂದು ಶ್ರೀಕಾಂತ್ ಹೇಳಿದ್ದಾನೆ. ಇದನ್ನೂ ಓದಿ: ಬಾಡಿಗೆದಾರರ ಕಿರುಕುಳ – ಮನೆ ಒಡತಿ ಆತ್ಮಹತ್ಯೆ, ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವು

MURDER 1 1

ಇದಕ್ಕೆ ಅತ್ತೆ-ಮಾವ ಸರಿ ಎಂದು ಹೇಳಿ ಎಲ್ಲರೂ ಊಟ ಮಾಡಿ ಪ್ರತ್ಯೇಕ ಮನೆಯಲ್ಲಿ ಮಲಗಿದ್ದಾರೆ. ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಶ್ರೀಕಾಂತ್ ತನ್ನ ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ (Hammer) ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಲಕ್ಷ್ಮಿ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾಳೆ. ಬಳಿಕ ಪಕ್ಕದಲ್ಲೇ ಇದ್ದ ಮಕ್ಕಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಶ್ರೀಕಾಂತ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆಂಡತಿ ಹೆದರಿಸಲು ಬೆಂಕಿ ಹಚ್ಚಿಕೊಂಡ ಭೂಪ

ಲಕ್ಷ್ಮಿ ತಾಯಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮಾರಣಾಂತಿಕ ಹಲ್ಲೆಗೊಳಗಾದ ಲಕ್ಷ್ಮಿಯನ್ನು ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಏನು ತಪ್ಪು ಮಾಡದ ಎರಡು ಮುದ್ದಾದ ಜೀವಗಳು ತಂದೆಯ ಕ್ರೌರ್ಯಕ್ಕೆ ಬಲಿಯಾಗಿವೆ. ಈ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಕಾಂತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಪ್ರಕರಣ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದು, ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಂಧಿಕರಿಂದ ಹಲ್ಲೆ

Share This Article