ತುಮಕೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿಯೊಂದಿಗೆ ಜಗಳವಾಡಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತಂಗನಹಳ್ಳಿಯಲ್ಲಿ (Tanganahalli) ಬುಧವಾರ ರಾತ್ರಿ ನಡೆದಿದೆ.
ವಿನೋದ್ (35) ಬೆಂಕಿ ಹಚ್ಚಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಕುಲ್ಲಕ ಕಾರಣಕ್ಕೆ ಗಂಡ ಹಾಗೂ ಹೆ0ಡತಿ ನಡುವೆ ಜಗಳವಾಗಿದೆ. ಈ ವೇಳೆ ಹೆಂಡತಿಯನ್ನು ಹೆದರಿಸಲು ಬೈಕ್‍ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ
Advertisement
Advertisement
ವಿನೋದ್ ಮೂಲತಃ ಆಂಧ್ರ ಪ್ರದೇಶದ (Andhra Pradesh) ಹಿಂದೂಪುರದ ಹೌಸಿಂಗ್ ಗ್ರಾಮದವನು. ತಂಗನಹಳ್ಳಿಯ ಆಶಾ ಎಂಬುವರನ್ನು ಮದುವೆಯಾಗಿ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ. ಮದುವೆಯಾದ ಒಂದೆರಡು ವರ್ಷ ಮಾತ್ರ ಸರಿಯಾಗಿ ಸಂಸಾರ ಮಾಡಿದ್ದ. ಈತ ಗಾರೆ ಕೆಲಸ ಮಾಡಿಕೊಂಡು, ಬರುವ ಹಣವನ್ನು ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದ. ಕಳೆದ 8-10 ವರ್ಷಗಳಿಂದಲೂ ಪಾನಮತ್ತನಾಗಿ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಧಿಕರಿಂದ ಹಲ್ಲೆ
Advertisement