ಜೈಪುರ: ಜಮೀನಿನಲ್ಲಿ ಮಣ್ಣು ತೆಗೆಯುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಘಟನೆ ರಾಜಸ್ಥಾನದ (Rajasthan) ಅಜ್ಮೀರ್ (Ajmer) ಜಲ್ಲೆಯ ಬೇವಾರ್ನಲ್ಲಿ ನಡೆದಿದೆ.
ಆರೋಪಿಯನ್ನು ಭ್ಗಾಗ ಎಂದು ಗುರುತಿಸಲಾಗಿದೆ. ಆರೋಪಿಯ ಸೋದರಳಿಯ ಹಮೀದ್ನ ಜಮೀನಿನಲ್ಲಿ ಮಣ್ಣು ತೆಗೆಯುತ್ತಿದ್ದ. ಇದನ್ನು ಪ್ರಶ್ನಿಸಿದ ಸೋದರಳಿಯನ ಮೇಲೆ ಆರೋಪಿ ತನ್ನ ಬಳಿ ಇದ್ದ ಡಬಲ್ ಬ್ಯಾರೆಲ್ ರೈಫಲ್ನಿಂದ (Double Barrel Rifle) ಗುಂಡು ಹಾರಿಸಿದ್ದಾನೆ. ತಕ್ಷಣವೇ ಗಾಯಗೊಂಡಿದ್ದ ಹಮೀದ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದಿಶಾ ಪಟಾನಿ ಜಿಪ್ ಲೆಸ್ ಪ್ಯಾಂಟ್ : ನೆಟ್ಟಿಗರಿಂದ ನಟಿಗೆ ಮಂಗಳಾರತಿ

