ಸ್ವಂತ ಮಗಳ ಕೆನ್ನೆ, ಎದೆಯ ಭಾಗಕ್ಕೆ ಕಚ್ಚಿದ ತಂದೆ

Advertisements

ಬೆಳಗಾವಿ: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ಐದು ವರ್ಷದ ಮಗಳ ಕೆನ್ನೆ ಮತ್ತು ಎದೆಯ ಭಾಗಕ್ಕೆ ಕಚ್ಚಿ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.

Advertisements

ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಗಳ ಮೇಲೆ ವಿಕೃತಿ ಮೆರೆದ ತಂದೆ ಕಾಕಾತಿ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಆರ್‌ಎಂಸಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಇತ್ತ ಖಾಸಗಿ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಮಗುವಿನ ತಾಯಿ ಸೇವೆ ಸಲ್ಲಿಸುತ್ತಿದ್ದು ತಾಯಿ ಕೆಲಸಕ್ಕೆ ತೆರಳಿದ ವೇಳೆ ಕುಡಿದ ನಶೆಯಲ್ಲಿ ತಂದೆ ವಿಕೃತಿ ಮೆರೆದಿದ್ದಾನೆ. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ ಪ್ರಕರಣ – ಗೋವಾದಲ್ಲಿ ಕಾಮುಕ ಅರೆಸ್ಟ್

Advertisements

ಸದ್ಯ ಆರೋಪಿ ತಂದೆಯನ್ನು ಕಾಕತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಮಗು ಚೇತರಿಕೆ ಕಾಣುತ್ತಿದೆ. ಇದನ್ನೂ ಓದಿ: ದೂರು ದಾಖಲಿಸಿಲ್ಲ ಎಂದು ನವಜಾತ ಶಿಶುವಿನ ಶವದೊಂದಿಗೆ ಪೊಲೀಸ್ ಮೆಟ್ಟಿಲೇರಿದ

Live Tv
Advertisements
Advertisements

Exit mobile version