CrimeDistrictsKarnatakaKoppalLatestMain Post

ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ ಪ್ರಕರಣ – ಗೋವಾದಲ್ಲಿ ಕಾಮುಕ ಅರೆಸ್ಟ್

Advertisements

ಕೊಪ್ಪಳ: ನೆರೆಮನೆಯ ಮಹಿಳೆಯರೊಂದಿಗೆ ಸರಸವಾಡಿ, ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಮುಕ ಶಿಕ್ಷಕ ಅಜರುದ್ದೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ಮಹಿಳೆಯರು ಮತ್ತು ಮಕ್ಕಳನ್ನು ಕಾಮದಾಟಕ್ಕೆ ಬಳಸಿಕೊಂಡಿದ್ದ ವೀಡಿಯೋ ವೈರಲ್ ಆಗಿದ್ದವು. ನಂತರ ಈ ವೀಡಿಯೋದಲ್ಲಿದ್ದ ಮಹಿಳೆ ಅಜರುದ್ದೀನ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಆರೋಪಿ ಅಜರುದ್ದೀನ್ ಅನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ – 40 ಮಹಿಳೆಯರೊಂದಿಗೆ ಶಿಕ್ಷಕ ರಾಸಲೀಲೆ

ಅಜರುದ್ದೀನ್ ವಿರುದ್ಧ ಕೊಪ್ಪಳ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಅಜರುದ್ದೀನ್ ಲೈಂಗಿಕವಾಗಿ ಬಳಸಿ ಕೊಂಡಿದ್ದಾನೆ. ನಂತರ ನೀನು ಸಹಕರಿಸದಿದ್ದರೆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡದೇ ಹೋದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಕೂಡ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಳು. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ‌ ಪ್ರಕರಣ – ಕಾಮುಕನ ವಿರುದ್ಧ FIR ದಾಖಲು

ಪ್ರಕರಣದ ನಂತರ ಆರೋಪಿಯನ್ನು ಬಂಧಿಸಲು ಕೊಪ್ಪಳ ಎಸ್.ಪಿ. ಅರುಣಾಂಗ್ಷು ಗಿರಿ ಅವರು ವಿಶೇಷ ತನಿಖಾ ತಂಡ ರಚಸಿದ್ದರು. ತನಿಖೆ ವೇಳೆ ಗೋವಾದಲ್ಲಿ ಮಜಾ ಮಾಡುತ್ತಿದ್ದ ಅಜರುದ್ದೀನ್ ಇದೀಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

Live Tv

Leave a Reply

Your email address will not be published.

Back to top button