Exclusive- ರೈತಪರ ಚಿಂತಕ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ : ಸುದೀಪ್, ಧನಂಜಯ್, ನಾನಾ ಪಾಟೇಕರ್ ಯಾರಾಗ್ತಾರೆ ಹೀರೋ?

Public TV
3 Min Read
FotoJet 14

ರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ರೆಡಿಯಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ರೆಡಿಯಾಗಿದೆ. ಮುಂದಿನ ಹಂತಕ್ಕಾಗಿ ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ.

FotoJet 10 2

ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ ಅಪರೂಪದ ಹೋರಾಟಗಾರ ನಂಜುಂಡಸ್ವಾಮಿ. ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಸಮಾಜವಾದಿ ಯುವಜನ ಸಭಾ ಹುಟ್ಟು ಹಾಕಿ ನಿರಂತರ ಹೋರಾಟ ಮಾಡುತ್ತಾ ಬಂದವರು. ಪ್ರಖರ ವಿಚಾರ ಲಹರಿ, ಅದ್ಭುತ ಕನ್ನಡ ಭಾಷಾ ಬಳಕೆ, ಖಚಿತ ಅಂಕಿ ಅಂಶಗಳಿಂದ ಕೂಡಿದ ಭಾಷಣ, ನ್ಯಾಯಾಂಗದ ಬಗ್ಗೆ ಇದ್ದ ತಿಳುವಳಿಕೆ, ಜ್ಯಾತಿ ವ್ಯವಸ್ಥೆಯ ಬಗೆಗಿನ ಆಕ್ರೋಶದ ಒಟ್ಟು ಮೊತ್ತ ಆಗಿದ್ದವರು ನಂಜುಂಡಸ್ವಾಮಿ. ಜ್ಯಾತ್ಯಾತೀಯ ರಾಷ್ಟ್ರದಲ್ಲಿ ಜಾತಿ ಸಮ್ಮೇಳನ ಆಗಬಾರದೆಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕಪ್ಪು ಬಾವುಟ ಪ್ರದರ್ಶನ, ವಂಶಪಾರಂಪರ್ಯವಾಗಿ ಆಡಳಿತ ನಡೆಸುವುದರ ವಿರುದ್ಧ ಪ್ರತಿಭಟನೆ, ಕಾರ್ಮಿಕರಿಗೆ ಕಾನೂನುಬದ್ಧ ವೇತನ ಕೊಡದಿದ್ದರೆ ಪ್ರತಿಭಟನೆ, ರೈತರಿಗೆ ಅನ್ಯಾಯವಾದಾಗೆಲ್ಲ ನಂಜುಂಡಸ್ವಾಮಿ ಅವರು ಇದ್ದೇ ಇರುತ್ತಿದ್ದರು. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

FotoJet 9 2

ರೈತರಿಗೆ ದೋಖಾ ಮಾಡುತ್ತಿದ್ದ ಹಲವು ಖಾಸಗಿ ಕಂಪೆನಿಗಳ ವಿರುದ್ಧ ಹೋರಾಟ, ಸರಕಾರಗಳ ಕ್ರಮದ ವಿರುದ್ಧ ಹೋರಾಟ ಹೀಗೆ ಹಠಾತ್ ದಾಳಿಗಳನ್ನು ಮಾಡುತ್ತಲೇ ಬೆಚ್ಚಿ ಬೀಳಿಸುತ್ತಿದ್ದರು ನಂಜುಂಡಸ್ವಾಮಿ. ಅದರಲ್ಲೂ ರೈತರಿಗೆ ಬ್ಯಾಂಕ್ ಗಳು ನೀಡುವ ಕಿರುಕುಳಕ್ಕೆ ನಿರಂತರವಾಗಿ ಪ್ರತಿಭಟನೆ ಇದ್ದೇ ಇರುತ್ತಿತ್ತು. ರೈತ ಸಂಘವೆಂದರೆ ನಂಜುಂಡಸ್ವಾಮಿ, ನಂಜುಂಡ ಸ್ವಾಮಿ ಅಂದರೆ ರೈತ ಸಂಘ ಎನ್ನುವಷ್ಟರ ಮಟ್ಟಿಗೆ ಅವರು ರೈತರೊಂದಿಗೆ ಬೆರೆತು ಹೋಗಿದ್ದರು.

FotoJet 5 2

ಇಂತಹ ಹೋರಾಟಗಾರರ ಬಯೋಪಿಕ್ ಸಿನಿಮಾವಾಗಬೇಕು ಎನ್ನುವುದು ಹಲವರ ಆಶಯವಾಗಿತ್ತು. ಅದಕ್ಕೆ ಮೊದಲು ನೀರೆರೆದದ್ದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ. ಹಲವು ವರ್ಷಗಳ ಹಿಂದಿಯೇ ಪ್ರೊಫೆಸರ್ ಕುಟುಂಬವನ್ನು ಮಂಸೋರೆ ಸಂಪರ್ಕಿಸಿದರು. ಆದರೆ, ನಾನಾ ಕಾರಣಗಳಿಂದಾಗಿ ಅದು ಆಗಲಿಲ್ಲ. ಈ ಹಿಂದೆ ಖ್ಯಾತ ಬರಹಗಾರ ನಟರಾಜ್ ಹುಳಿಯಾರ್  ಅವರು ನಂಜುಂಡ ಸ್ವಾಮಿ ಅವರು ಕುರಿತಾದ ನಾಟಕ ಮತ್ತು ಚಿತ್ರಕಥೆ ರೆಡಿ ಮಾಡಿದರು. ಸಿನಿಮಾಗೆ ಮತ್ತೊಂದು ವೇಗ ಸಿಕ್ಕಿತು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

FotoJet 11 2

ನಂಜುಂಡಸ್ವಾಮಿ ಅವರ ಪಾತ್ರವನ್ನು ಡಾ.ವಿಷ್ಣುವರ್ಧನ್ ಮಾಡಬೇಕು ಎನ್ನುವುದು ಹಲವರ ಆಸೆಯಾಗಿತ್ತು. ಯಾಕೆಂದರೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ಹೂವಯ್ಯನ ಪಾತ್ರ ಹೆಣೆದಿದ್ದರಲ್ಲ, ಅದು ಪ್ರೊಫೆಸರ್ ನಂಜುಂಡಸ್ವಾಮಿ ಅವರ ಬದುಕನ್ನೇ ಆಧರಿಸಿತ್ತು. ಆದರೆ, ಡಾ.ವಿಷ್ಣುವರ್ಧನ್ ಕಾಲವಾದರು.

FotoJet 1 4

ಕೆಲ ವರ್ಷಗಳ ಹಿಂದೆ ನಿರ್ದೇಶಕ ಕೇಸರಿ ಹರವು ಕೂಡ ಈ ಸಿನಿಮಾದ ಬಗ್ಗೆ ಆಸಕ್ತಿ ತಗೆದುಕೊಂಡು ನಂಜುಂಡಸ್ವಾಮಿ ಅವರ ಪಾತ್ರವನ್ನು ನಾನಾ ಪಾಟೇಕರ್ ಮಾಡಿದರೆ ಸರಿಯಾಗಿರುತ್ತದೆ ಎಂದು ಅವರನ್ನು ಅಪ್ರೋಚ್ ಮಾಡಿದ್ದರು. ನಾನಾ ಕೂಡ ಪ್ರೊಫೆಸರ್ ಅವರ ಹೋರಾಟದ ವಿಡಿಯೋಗಳನ್ನು ಗಮನಿಸಿದ್ದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

FotoJet 12 1

ಅಲ್ಲದೇ, ಡಾಲಿ ಧನಂಜಯ್ ಅವರಿಗೂ ಈ ಸ್ಕ್ರಿಪ್ಟ್ ಕಳುಹಿಸಲಾಗಿತ್ತು. ಈ ಇಬ್ಬರೂ ಕಲಾವಿದರ ಮಧ್ಯೆ ಇದೀಗ ಮತ್ತೊಂದು ಯೋಜನೆ ಸಿದ್ಧವಾಗುತ್ತಿದೆ. ನಂಜುಂಡಸ್ವಾಮಿ ಅವರ ಪಾತ್ರವನ್ನು ಸುದೀಪ್ ಅವರು ಮಾಡಲಿ ಎನ್ನುವುದು ಪ್ರೊಫೆಸರ್ ಕೆಲ ಅಭಿಮಾನಿಗಳ ಬೇಡಿಕೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

FotoJet 4 2

ನಂಜುಂಡಸ್ವಾಮಿ ಅವರ ಪತ್ನಿಯ ಪಾತ್ರದಲ್ಲಿ ರಮ್ಯಾ ಇರಲಿ ಎಂದೂ ಯೋಚಿಸಲಾಗಿದೆಯಂತೆ. ಈ ಇಬ್ಬರೂ ಕಲಾವಿದರನ್ನು ಭೇಟಿ ಮಾಡುವ ಆಲೋಚನೆ ಕೂಡ ಇದೆ. ಆದರೆ, ಇನ್ನೂ ಅವರಿಗೆ ಈ ವಿಷಯವನ್ನು ತಲುಪಿಸಿಲ್ಲ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

FotoJet 8 2

‘ರೈತರು, ಕಾರ್ಮಿಕರು ಮತ್ತು ನಿರ್ಗತಿಕರ ಬದುಕಿಗೆ ನಂಜುಂಡ ಸ್ವಾಮಿ ಅವರು ದೊಡ್ಡ ಶಕ್ತಿಯಾಗಿದ್ದರು. ಅವರ ಸಿನಿಮಾ ಬರಬೇಕು ಎನ್ನುವುದು ನಮ್ಮ ಕುಟುಂಬದ ಆಸೆ. ಹಾಗಾಗಿ ಹಲವರು ಹಲವು ಕಲಾವಿದರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೋ? ಯಾವಾ ಸಿನಿಮಾ ಆಗುತ್ತದೆಯೋ ಕಾದು ನೋಡಬೇಕು’ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿ.

Share This Article
Leave a Comment

Leave a Reply

Your email address will not be published. Required fields are marked *