ಶಿವಣ್ಣ (Shivarajkumar) ದಿಲ್ ಖುಷ್. ಜೈಲರ್ ಚಿತ್ರದ 10 ನಿಮಿಷದ ಪಾತ್ರಕ್ಕೆ ಸಿಕ್ಕ ಬಹುಪರಾಕ್‌ಗೆ ಫ್ಯಾನ್ಸ್ ಕೇಕೆ ಹಾಕಿದ್ದಾರೆ. ಅದರ ಪರಿಣಾಮ ಈಗ ಕಾಣಿಸುತ್ತಿದೆ. ತಮಿಳುನಾಡಿನಿಂದ ಹಲವಾರು ಅಭಿಮಾನಿಗಳು(Fans) ಶಿವಣ್ಣನ ಶ್ರೀಮುತ್ತು ಮನೆಗೆ ಆಗಮಿಸಿದ್ದಾರೆ. ಶಿವಣ್ಣನ ಅಭಿನಯಕ್ಕೆ ಉಘೇ ಎಂದಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ
Advertisement
ಶಿವಣ್ಣನಿಗೆ 60 ವರ್ಷ. ಆದರೆ ಈಗಲೂ 25ರ ಹುರುಪು. ಮುಖದಲ್ಲೂ ಹಾಗೂ ಮನಸಲ್ಲೂ. ಅದೇ ಕಾರಣಕ್ಕೆ ಚಿರ ಯುವಕನ ಬಿರುದು ದಕ್ಕಿದೆ. ಈ ವಯಸ್ಸಿನಲ್ಲಿ ರಜನಿ ಜೊತೆ ತಮಿಳು ಸಿನಿಮಾದಲ್ಲಿ ನಟಿಸಿದ್ದು, ಕೇವಲ ಹತ್ತು ನಿಮಿಷದ ನರಸಿಂಹ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶ್ವವೇ ಬಹುಪರಾಕ್ ಹಾಕಿದ್ದು, ಕಣ್ಣ ಮುಂದಿದೆ. ಅದರ ಪರಿಣಾಮ ಏನು? ತಮಿಳುನಾಡಿನಿಂದಲೇ ಗುಂಪುಗಟ್ಟಲೆ ಭಕ್ತರು ಶಿವಣ್ಣನ ಮನೆಗೆ ಹೋದರು. ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಭಿಮಾನಿಗಳ ಅಭಿಮಾನಕ್ಕೆ ಶಿವಣ್ಣ ಕೈ ಮುಗಿದರು.
Advertisement
Advertisement
ಇದು ನೋಡಿ ಶಿವಣ್ಣನ ತಾಕತ್ತು. ಪಾತ್ರ ಯಾವುದಾದರೂ ಎಷ್ಟು ಚಿಕ್ಕದಾದರೂ ಅದನ್ನು ಶ್ರದ್ಧೆಯಿಂದ ಮಾಡಿದರೆ ಜನರು ಕೊಡುವ ಗೌರವ ಆಕಾಶದಷ್ಟು. ಅದೇ ಕಾರಣಕ್ಕೆ ಆ ರಾಜ್ಯದ ಫ್ಯಾನ್ಸ್ ಮನ ಗೆದ್ದಿದ್ದಾರೆ. ಜೊತೆಗೆ ಅನೇಕ ಆಫರ್‌ಗಳು ಅಲ್ಲಿಂದ ಬರುತ್ತಿವೆ. ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏನಾದರಾಗಲಿ ನಮ್ಮ ಶಿವಣ್ಣ ಹೀಗೆ ಗಡಿ ದಾಟಿ ಬಾವುಟ ಹಾರಿಸುವುದು ಇದೆಯಲ್ಲ. ಅದನ್ನು ಇಡೀ ಕರುನಾಡು ಮೆರವಣಿಗೆ ಮಾಡುತ್ತಿದೆ. ಸೆಂಚುರಿಸ್ಟಾರ್ ಸಡಗರ ಸದಾ ಹೀಗೆ ಇರಲಿ ಎಂಬುದೇ ಅಭಿಮಾನಿಗಳ ಆಶಯ.
Advertisement
ಜೈಲರ್ (Jailer) ಸಿನಿಮಾದಲ್ಲಿ ರಜನಿಕಾಂತ್ (Rajanikanth) ಜೊತೆ ಶಿವಣ್ಣ (Shivanna) ಕೂಡ ಮಿಂಚಿದ್ದರು. ನಟಿಸಿದ 10 ನಿಮಿಷದ ಶಿವಣ್ಣ ಆ್ಯಕ್ಟಿಂಗ್ ನೋಡಿ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಈ ಬೆನ್ನಲ್ಲೇ ಶಿವಣ್ಣಗೆ ಮಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಕಡೆಗಳಿಂದ ನಟನೆಗೆ ಬಂಪರ್ ಆಫರ್ ಸಿಕ್ತಿದೆ.