ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರ ಅಂತ್ಯ ಸಂಸ್ಕಾರ ಮುಂಬೈನಲ್ಲಿ ಇಂದು ನಡೆಯಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ವಿಧಿವಿಧಾನಗಳ ಮೂಲಕ ಕೆಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಕೆಕೆ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಾಲಿವುಡ್ ನಟ ನಟಿಯರು, ಕೆಕೆ ಅಭಿಮಾನಿಗಳು ಕೆಕೆ ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ : ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್
ಕೆಕೆ ನಿಧನಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಗಾಯಕರಾದ ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್ ಸೇರಿದಂತೆ ಸಾಕಷ್ಟು ತಾರೆಯರು ಸಂತಾಪ ಸೂಚಿಸಿದ್ದರು. ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದರು. ಕೋಲ್ಕತ್ತಾ ಸರಕಾರ ಸರಕಾರಿ ಗೌರವ ಕೂಡ ನೀಡಿದೆ. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ
ಮಂಗಳವಾರ ರಾತ್ರಿ ಕೆಕೆ ಅವರು ಕೋಲ್ಕತ್ತಾ ಠಾಕೂರ್ಪುಕೂರ್ ವಿವೇಕಾನಂದ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಲು ಹೋಗಿದ್ದರು. ಒಂದು ಗಂಟೆ ಕಾರ್ಯಕ್ರಮ ನೀಡಿದ ನಂತರ, ಮಧ್ಯದಲ್ಲೇ ಅವರು ಅಸ್ವಸ್ಥರಾಗಿದ್ದರು. ವಿಶ್ರಾಂತಿ ಪಡೆಯಲೆಂದೇ ಅವರು ಹೋಟೆಲ್ ಗೆ ತೆರೆಳಿದರು. ಅಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲದೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಯಾವುದೇ ಪ್ರಯೋಜನವಾಗಲಿಲ್ಲ.