ಬೆಂಗಳೂರು: “ಭಾರತದ ಅತ್ಯಂತ ಅಪಾಯಕಾರಿ ನದಿ ವಿಶ್ವಾಮಿತ್ರಿ. ಈ ನದಿಯಲ್ಲಿರುವ ಮೊಸಳೆಗಳು ಹೇಗಿವೆ ನೋಡಿ” ಎಂದು ಸಾಲುಗಳೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ವಿಡಿಯೋ ಮತ್ತು ಅದರಲ್ಲಿ ಸಂದೇಶಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ.
ಕೆಲ ದಿನಗಳಿಂದ ನದಿಯಲ್ಲಿ ಹರಿದಾಡುತ್ತಿರುವ ಮೊಸಳೆಗಳಿರುವ ವಿಡಿಯೋ ವೈರಲ್ ಆಗುತ್ತಿದೆ. ಹೆಲಿಕಾಪ್ಟರ್ ನಿಂದ ಈ ವಿಡಿಯೋ ತೆಗೆಯಲಾಗಿದೆ. ಈಗ ಗುಜರಾತಿನಲ್ಲಿ ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲೇ ಈ ವಿಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.
Advertisement
Advertisement
ವಿಡಿಯೋ ಎಲ್ಲಿಯದ್ದು?
ಅಮೆರಿಕದ ಫ್ಲೋರಿಡಾದಲ್ಲಿರುವ ಎವರ್ ಗ್ಲೇಡ್ಸ್ ಮೊಸಳೆ ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವಾರು ಸಸ್ತನಿಗಳ ಅವಾಸಸ್ಥಾನವಾಗಿದ್ದು ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿರುವ ಮೊಸಳೆಗಳಿರುವ ವಿಡಿಯೋವನ್ನು ಹೆಲಿಕಾಪ್ಟರ್ ನಲ್ಲಿ ಶೂಟ್ ಮಾಡಲಾಗಿತ್ತು. ಈ ವಿಡಿಯೋವನ್ನು ಆರ್ ಓಎಫ್‍ಎಫ್‍ಎಸ್ ಒಶಿಯನ್ ಫಿಶಿಂಗ್ ಫಾರ್‍ಕಾಸ್ಟಿಂಗ್ ಸರ್ವಿಸ್ ಹೆಸರಿನ ಯೂ ಟ್ಯೂಬ್ ಖಾತೆ 2018ರ ಮೇ 23 ರಂದು ಅಪ್ಲೋಡ್ ಮಾಡಿದೆ. ಈ ವಿಚಾರವನ್ನು ತಿಳಿಯದ ಜನ ಸಾಮಾಜಿಕ ಜಾಲತಾಣದಲ್ಲಿ ಗುಜರಾತಿನ ನದಿಯಲ್ಲಿ ಕಂಡು ಬಂದ ದೃಶ್ಯ ಎಂದು ಬಿಂಬಿಸುತ್ತಿದ್ದಾರೆ.
Advertisement
ಗುಜರಾತ್ ಸೇರಿದಂತೆ ಮಹಾರಾಷ್ಟ್ರದಲ್ಲಿ ಈಗ ಭಾರೀ ಮಳೆಯಾಗುತ್ತಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಕಳೆದ ವಾರ ಪತ್ತೆಯಾಗಿತ್ತು.
Advertisement
ರತ್ನಗಿರಿಯ ಚಿಪ್ಲುನ್‍ನ ಪ್ರವಾಸಿ ರೆಸಾರ್ಟಿನ ಚರಂಡಿಯಲ್ಲಿ 8 ಅಡಿ ಮೊಸಳೆಯನ್ನು ಕಂಡು ಜನರು ದಂಗಾಗಿ ಹೋಗಿದ್ದರು. ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯ ವೈರಲ್ ಆಗುತ್ತಿದೆ. ಈ ಘಟನೆ ಚಿಪ್ಲುನ್‍ನ ದಾದರ್ ನಲ್ಲಿ ನಡೆದಿದ್ದು, ಜನರು ಮೊದಲು ಇದು ಮುಂಬೈನ ಸಬ್ ಅರ್ಬನ್ ದೃಶ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ರತ್ನಗಿರಿಯಲ್ಲಿ ಜೋರಾಗಿ ಮಳೆ ಆಗಿತ್ತು. ಮಳೆಯಿಂದಾಗಿ ವಶಿಷ್ಠಿ ನದಿಯಿಂದ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.