ಉತ್ತರ ಪ್ರದೇಶ | ನಕಲಿ ಐಎಎಸ್ ಅಧಿಕಾರಿ ಅರೆಸ್ಟ್‌ – ಐಷಾರಾಮಿ ಕಾರುಗಳು ಸೀಜ್‌

Public TV
1 Min Read
Fake IAS Officer Uttar Pradesh Police Lucknow

ಲಕ್ನೋ: ಉತ್ತರ ಪ್ರದೇಶದ (Uttar Pradesh) ವಜೀರ್‌ಗಂಜ್‌ನಲ್ಲಿ ಪೊಲೀಸರು (Police) ವಾಹನ ತಪಾಸಣೆ ನಡೆಸುವ ವೇಳೆ ನಕಲಿ ಐಎಎಸ್ ಅಧಿಕಾರಿಯೊಬ್ಬ (Fake IAS Officer) ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸೌರಭ್ ತ್ರಿಪಾಠಿ (36) ಎಂದು ಗುರುತಿಸಲಾಗಿದೆ. ಈತ ಬಿ.ಟೆಕ್ ಪದವೀಧರನಾಗಿದ್ದು, ಐಎಎಸ್‌ ಅಧಿಕಾರಿಯ ಸೋಗಿನಲ್ಲಿ ಓಡಾಡುತ್ತಿದ್ದ. ಕಾರ್ಗಿಲ್ ಪಾರ್ಕ್ ಬಳಿ ಈತನ ಕಾರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ಈತನ ನಡೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಈ ವೇಳೆ ವಿಚಾರಣೆ ನಡೆಸಿದಾಗ ಈತ ನಕಲಿ ಐಎಎಸ್‌ ಅಧಿಕಾರಿ ಎಂದು ತಿಳಿದು ಬಂದಿದೆ. ಇದನ್ನೂ ಓದಿ: 162 ಬಾರಿ ಫಾರಿನ್‌ ಟ್ರಿಪ್‌, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

ಆರೋಪಿಯು ಹಲವು ವರ್ಷಗಳಿಂದ ನಕಲಿ ಐಎಎಸ್ ಅಧಿಕಾರಿಯಂತೆ ನಟಿಸುತ್ತಿದ್ದ. ಈ ಮೂಲಕ ಕೆಲವು ಸವಲತ್ತುಗಳನ್ನು ಪಡೆದುಕೊಂಡಿದ್ದ. ಬಂಧನದ ಬಳಿಕ ಆತನ ಬಳಿಯಿದ್ದ ಹಲವಾರು ಐಷಾರಾಮಿ ಕಾರುಗಳು, ನಕಲಿ ಸರ್ಕಾರಿ ದಾಖಲೆಗಳು, ಅಧಿಕೃತ ಕಾರು ಪಾಸ್‌ಗಳನ್ನು, ಸೈರನ್‌ ಹೊಂದಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಐಷಾರಾಮಿ ಕಾರುಗಳಲ್ಲಿ ರೇಂಜ್ ರೋವರ್ ಮತ್ತು ಮರ್ಸಿಡಿಸ್-ಬೆನ್ಜ್ ಸಿ 220 ಸಹ ಸೇರಿದೆ. ಆತನ ವಾಹನಗಳ ಮೇಲೆ ‘ಭಾರತ ಸರ್ಕಾರ’ ಎಂಬ ಲೇಬಲ್ ಸಹ ಅಂಟಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಾನು ಅಧಿಕಾರಿ ಎಂದು ತೋರಿಸಿಕೊಳ್ಳಲು ಗನ್‌ಮ್ಯಾನ್‌ಗಳ ಜೊತೆ ಓಡಾಡುತ್ತಿದ್ದ. ಅಲ್ಲದೇ ಮಂತ್ರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಬಂಧನ – 45 ಲಕ್ಷ ಹಣ, ಐಷಾರಾಮಿ ಕಾರುಗಳು ವಶಕ್ಕೆ

Share This Article