ಫೇಸ್ ಟು ಫೇಸ್: ಗೆಲುವಿನ ಸೂಚನೆ ಕೊಟ್ಟಿತು ಚೆಂದದ ಟ್ರೈಲರ್!

Public TV
1 Min Read
face to face 1

ಸಂದೀಪ್ ಜನಾರ್ದನ್ ನಿರ್ದೇಶನ ಮಾಡಿರೋ ಫೇಸ್ ಟು ಫೇಸ್ ಚಿತ್ರ ಆರಂಭ ಕಾಲದಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಾ ಬಂದಿದೆ. ಇನ್ನೇನು ಬಿಡುಗಡೆಗೆ ತಯಾರಾಗಿರೋ ಈ ಸಿನಿಮಾದ ಆಕರ್ಷಕ ಟ್ರೈಲರ್ ಇದೀಗ ಲಾಂಚ್ ಆಗಿದೆ.

ಸುಮಿತ್ರಾ ಜನಾರ್ಧನ್ ನಿರ್ಮಾಣ ಮಾಡಿರುವ ಫೇಸ್ ಟು ಫೇಸ್ ಯುವ ಆವೇಗ ಹೊಂದಿರೋ ಹೊಸ ಬಗೆಯ ಚಿತ್ರ ಅಂತ ನಿರ್ದೇಶಕರು ಈ ಹಿಂದೆಯೇ ಹೇಳಿಕೊಂಡಿದ್ದರು. ಉಪೇಂದ್ರ ಶಿಷ್ಯ ಸಂದೀಪ್ ಈ ಚಿತ್ರದ ಮೂಲಕ ಹೊಸ ಪ್ರಯೋಗ ಮಾಡಿರೋದಾಗಿಯೂ ಹೇಳಿಕೊಂಡಿದ್ದರು. ಇದೀಗ ಹೊರ ಬಂದಿರೋ ಟ್ರೈಲರ್ ಅದೆಲ್ಲವನ್ನೂ ಸಾಕ್ಷೀಕರಿಸುವಂತಿದೆ.

face to face 1

ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ಜನರನ್ನು ತಲುಪಿಕೊಂಡಿರುವ ಈ ಟ್ರೈಲರ್ ವ್ಯಾಪಕ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಬಿಡುಗಡೆಗೆ ಕ್ಷಣಗಣನೆ ಆರಂಭಿಸಿರೋ ಈ ಸಿನಿಮಾ ಟ್ರೈಲರ್ ಮೂಲಕವೇ ಮತ್ತೆ ಚರ್ಚೆಗೆ ಬಂದಿದೆ. ರೋಹಿತ್ ಭಾನುಪ್ರಕಾಶ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ದಿವ್ಯಾ ಉರುಡಗ, ಪೂರ್ವಿ ನಾಯಕಿಯರಾಗಿ ಸಾಥ್ ನೀಡಿದ್ದಾರೆ.

ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕವೇ ಇದೊಂದು ಹೊಸ ಥರದ ಕಥೆ ಹೊಂದಿರುವ ಸೊಗಸಾದ ಚಿತ್ರ ಎಂಬ ಸೂಚನೆ ಸಿಕ್ಕಿದೆ. ಈ ಮೂಲಕ ಚಿತ್ರ ತಂಡದ ಪರಿಶ್ರಮಕ್ಕೆ ಆರಂಭಿಕ ಯಶ ಸಿಕ್ಕಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *