ಮೈಸೂರು ದಸರಾದಲ್ಲಿ ‘F0R REGN’ ಚಿತ್ರದ ಪೋಸ್ಟರ್ ರಿಲೀಸ್

Public TV
2 Min Read
For Regn 1

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ದಸರಾ ಸಡಗರ. ಇದೇ ಸಂದರ್ಭದಲ್ಲಿ ಪೃಥ್ವಿ ಅಂಬರ್ (Prithvi Amber) ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  ‘F0R REGN’ (ಫಾರ್ ರಿಜಿಸ್ಟರೇಷನ್) ಚಿತ್ರದ  ‘ಲವ್ ಗಳ್  ಸುಮಧುರ ಹಾರ್ಟ್ ಗಳ್ ಗಿರಗಿರ’ ಎಂಬ ಟ್ರಾವೆಲ್ ವಿಡಿಯೋ ಸಾಂಗ್ ಹಾಗೂ ನೂತನ ಪೋಸ್ಟರ್ ಬಿಡುಗಡೆಯಾಯಿತು. ‘ಮಾಲ್ ಆಫ್ ಮೈಸೂರು’ ಮಲ್ಟಿಪ್ಲೆಕ್ಸ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಯಿಂಟ್ ಕಮೀಷನರ್ ಕೆ.ಎಂ.ಸವಿತಾ ಅವರು ಹಾಡು ಹಾಗು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

For Regn 3

ಚಿತ್ರದ ನಾಯಕಿ ಮಿಲನಾ ನಾಗರಾಜ್ (Milana Nagaraj), ನಿರ್ದೇಶಕ ನವೀನ್ ದ್ವಾರಕನಾಥ್ (Naveen Dwarkanath) ಹಾಗೂ ನಿರ್ಮಾಪಕ ನವೀನ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಲ್ ನಲ್ಲಿ ಮೊಳಗಿದ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆದರು.  ಇದನ್ನೂ ಓದಿ:ನವೆಂಬರ್ ನಲ್ಲಿ ಅಜಯ್ ರಾವ್ ನಟನೆಯ ‘ಮನ್ ರೇ’ ಶೂಟಿಂಗ್

For Regn 2

ನಾಗಾರ್ಜುನ ಶರ್ಮ ಈ ಹಾಡನ್ನು ಬರೆದಿದ್ದು, ಆರ್ ಕೆ ಹರೀಶ್ ಸಂಗೀತ ನೀಡಿದ್ದಾರೆ. ಐರಾ ಉಡುಪಿ ಹಾಗೂ ದೀಪಕ್ ದೊಡ್ಡೇರ ಈ ಹಾಡನ್ನು ಹಾಡಿದ್ದಾರೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ. ಚಿತ್ರದ ನಾಯಕ ಪೃಥ್ವಿ ಅಂಬರ್ ವಿದೇಶ ಪ್ರವಾಸದಲ್ಲಿದ್ದು, ನವೆಂಬರ್ ನಲ್ಲಿ ಬರಲಿದ್ದಾರೆ. ಅವರು ಬಂದ ಕೂಡಲೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ನಿಶ್ಚಲ್ ಫಿಲಂಸ್ ಮೂಲಕ  ಎನ್ .ನವೀನ್ ರಾವ್ ನಿರ್ಮಿಸಿರುವ ಈ ಚಿತ್ರವನ್ನು  ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ,  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ಪೃಥ್ವಿ ಅಂಬರ್, ಮಿಲನ‌ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು  ತಾರಾಬಳಗದಲ್ಲಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article