– ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!
ಪ್ಯಾರಿಸ್: ಆಪರೇಷನ್ ಸಿಂಧೂರ (Operation Sindoor ) ಕಾರ್ಯಾಚರಣೆಗೆ ಪ್ರತ್ಯುತ್ತರವಾಗಿ ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ, ಈ ಸಂದರ್ಭದಲ್ಲಿ ಭಾರತದ ರಫೇಲ್ ಯುದ್ಧ ವಿಮಾನಗಳನ್ನ (Rafale Fighter Jet) ಹೊಡೆದುರುಳಿಸಿದ್ದೇವೆ ಅಂತ ಪದೇ ಪದೇ ಸುಳ್ಳು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ಬೆತ್ತಲಾಗಿದೆ.
The French Navy has called out Pakistan’s Geo TV and its correspondent Hamid Mir for spreading “misinformation and disinformation.”
In his report, Hamid Mir peddled the same old, fabricated claims about Rafales and the so-called May conflict and has now been publicly exposed.… https://t.co/KakWUDSQwU
— Amit Malviya (@amitmalviya) November 23, 2025
ರಫೇಲ್ ನಷ್ಟದ ಕುರಿತು ಪಾಕಿಸ್ತಾನಿ ಪತ್ರಕರ್ತ (Pakistani Journalist) ಹಮೀದ್ ಮಿರ್ ಅವರ ಲೇಖನವನ್ನ ಫ್ರೆಂಚ್ ನೌಕಾಪಡೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಇದು ಅಪ್ಪಟ ಸುಳ್ಳು ʻವ್ಯಾಪಕ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿದೆ. ಇದನ್ನೂ ಓದಿ: ʼಪಾಕ್ ಸೆರೆ ಹಿಡಿದʼ ರಫೇಲ್ ಪೈಲಟ್ ಜೊತೆ ಫೋಟೋ ಕ್ಲಿಕ್ಕಿಸಿದ ದ್ರೌಪದಿ ಮುರ್ಮು!

ಪಾಕ್ ವರದಿ ಅಪ್ಪಟ ಸುಳ್ಳು
ʻFrench commander confirms Pakistan air superiority in May 2025 combat with Indiaʼ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿದ್ದ ಪಾಕಿಸ್ತಾನಿ ಪರ್ತಕರ್ತ ಹಮೀದ್ ಮಿರ್ ಲೇಖನಕ್ಕೆ ಎಕ್ಸ್ ಪೋಸ್ಟ್ ಮೂಲಕ ಫ್ರೆಂಚ್ ನೌಕಾಪಡೆಯ ಸ್ಪಷ್ಟನೆ ನೀಡಿದೆ. ಹಮೀದ್ ಮಿರ್ ಪ್ರಕಟಿಸಿದ ಲೇಖನ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಮಾಡಿದವ್ರು ಪಾಕಿಗಳು, ವೋಟರ್ ಐಡಿ, ಚಾಕ್ಲೆಟ್ ಸಾಕ್ಷ್ಯ – ವಿಪಕ್ಷಗಳಿಗೆ ಎಳೆಎಳೆಯಾಗಿ ಘಟನೆ ವಿವರಿಸಿದ ಅಮಿತ್ ಶಾ
ಪಾಕಿಸ್ತಾನಿ ಪತ್ರಕರ್ತನ ಲೇಖನದ ಪ್ರಕಾರ, ಮೇ ತಿಂಗಳಲ್ಲಿ ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನ ವಾಯುಶ್ರೇಷ್ಠತೆ ಮೆರೆದಿತ್ತು. ಇದನ್ನ ಸ್ವತಃ ಫ್ರೆಂಚ್ ಕಮಾಂಡರ್ ದೃಢಪಡಿಸಿದ್ದಾರೆ ಎಂದು ಉಲ್ಲೇಖಿಸಿತ್ತು. ಈ ವರದಿಯನ್ನ ಫ್ರೆಂಚ್ ನೌಕಾಪಡೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದೆ.
![]()
ಬಿಜೆಪಿ ರಿಯಾಕ್ಷನ್
ಈ ಬೆನ್ನಲ್ಲೇ ಫ್ರೆಂಚ್ ನೌಕಾಪಡೆಯ ಹೇಳಿಕೆಗೆ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. ʻಪಾಕಿಸ್ತಾನದ ಸುಳ್ಳಿನ ಮುಖವಾಡ ಮತ್ತೊಮ್ಮೆ ಬಹಿರಂಗಗೊಂಡಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದಿರುವುದಾಗಿ ಕಟ್ಟು ಕಥೆ ಹೇಳುತ್ತಿತ್ತು. ಇದನ್ನೇ ಪ್ರಚಾರದ ಒಂದು ಮಾದರಿಯಾಗಿ ಮಾಡಿಕೊಂಡಿತ್ತು. ಈಗ ಸುಳ್ಳಿನ ಎಲ್ಲಾ ಮುಖವಾಡ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್ ಶಾ
