ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಅವಧಿ ವಿಸ್ತರಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದರೆ ಅವಧಿ ವಿಸ್ತರಣೆ ಆಗಬಹುದು. ಇದುವರೆಗೂ ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ನಮಗೆ ಸಮಯ ಕೊಟ್ಟರೆ ಕ್ರಾಸ್ ಚೆಕ್ ಮಾಡಿ ವರದಿ ಕೊಡುತ್ತೇವೆ. ಮುಖ್ಯಮಂತ್ರಿಗಳೇ ಆಯೋಗದ ಅವಧಿ ಬಗ್ಗೆ ಹೇಳಿದ ಮೇಲೆ ಒಳ್ಳೆಯದಾಯ್ತು, ಇನ್ನೂ ಸಮಯ ಸಿಗುತ್ತದೆ. ಜನವರಿಯಷ್ಟು ಸಮಯ ಬೇಕಾಗಿಲ್ಲ ಬೇಗನೆ ವರದಿ ಕೊಡುತ್ತೇವೆ. ವರದಿ ಕೊನೆಯ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ವರದಿ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್
ಪೂರ್ತಿ ಆಯೋಗವೇ ಮುಂದುವರಿಯಲಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಈ ವರದಿ ಆಯೋಗದ ವರದಿ ಆಗಿರುತ್ತದೆಯೇ ಹೊರತು ಕಾಂತರಾಜು, ಜಯಪ್ರಕಾಶ್ ಮುಖ್ಯ ಅಲ್ಲ. ವರದಿ ಯಾವುದೇ ರೀತಿಯಲ್ಲಿಯೂ ಲೀಕ್ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗೊಳಿಸಿ.. ಸಂಚಾರ ದಟ್ಟಣೆ ನಿವಾರಿಸಿ: ಡಿಸಿಎಂಗೆ ಲೆಹರ್ ಸಿಂಗ್ ಪತ್ರ