ಮೈಸೂರು: ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯ ರೋಜ್ ಗಾರ್ ಯೋಜನೆಯಲ್ಲಿ ಸಾಲ ಕೊಡಿಸಲು ಪಾಲಿಕೆಯ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರನೊಬ್ಬ ಲಂಚ ಸ್ವೀಕರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಪಾಲಿಕೆಯಲ್ಲಿ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರ ಶಿವಕುಮಾರ್ ಎಂಬಾತ ಲಂಚ ಸ್ವೀಕರಿಸಿದ್ದಾನೆ. ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರು ತಾನೂ ಕ್ಲರ್ಕ್ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ.
Advertisement
ತೇಜಸ್‍ಕುಮಾರ್ ಎಂಬವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ರೂ. ಹಣ ಸ್ವೀಕರಿಸಿದ್ದಾನೆ. 15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾನೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನ ಬಳಸಿಕೊಂಡು ಶಿವಕುಮಾರ್ ಲಂಚಾವತಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
Advertisement
ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಲಂಚ ಪಡೆಯುವ ಈತನ ಅಸಲಿ ಬಣ್ಣವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಣ ಕಳೆದುಕೊಂಡು ಸಾಲವು ದೊರೆಯದ ಸಾರ್ವಜನಿಕರು ಈತನ ವಿರುದ್ಧ ಧ್ವನಿ ಎತ್ತಿದ್ದಾರೆ.
Advertisement
https://www.youtube.com/watch?v=WmC832D4pDw