-ತನಿಖೆಯಲ್ಲಿ ಸ್ಫೋಟಕ ವಿಚಾರ ಬೆಳಕಿಗೆ
ಬೆಂಗಳೂರು: ಕಸ್ಟಮ್ಸ್ ಮಹಿಳಾ ಅಧಿಕಾರಿಗೆ (Customs Officer) ಬ್ಲ್ಯಾಕ್‌ಮೇಲ್ (Blackmail) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಪಾಲನಿ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ 50 ಮಂದಿಗೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಕೇಸಲ್ಲಿ ಪುಲಕೇಶಿ ನಗರ ಪೊಲೀಸರು ಕೃಪಾಲನಿಯನ್ನು ಬಂಧಿಸಿದ್ದರು. ಆರೋಪಿ ವಿಚಾರಣೆ ವೇಳೆ 50 ಜನರಿಗೆ ಬ್ಲಾಕ್‌ಮೇಲ್ ಮಾಡಿರೋದು ಪತ್ತೆಯಾಗಿದೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಆರೋಪಿ ಕೃಪಾಲನಿ ಟಾರ್ಗೆಟ್ ಮಾಡುತ್ತಿದ್ದ. ಉದ್ಯಮಿ ಎಂದು ಸರ್ಕಾರಿ ಮಹಿಳಾ ಅಧಿಕಾರಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಕಸ್ಟಮ್ಸ್, ಜಿಎಸ್ಟಿ ಅಧಿಕಾರಿಗಳೇ ಈತನ ಟಾರ್ಗೆಟ್ ಆಗಿದ್ದರು. ಇದನ್ನೂ ಓದಿ: ಕೀವ್‌ನ ಸೂಪರ್‌ಮಾರ್ಕೆಟ್‌ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ – 6 ಮಂದಿ ಸಾವು
ಪರಿಚಯ ಮಾಡಿಕೊಂಡು ಲಂಚ್, ಡಿನ್ನರ್, ಪಾರ್ಟಿ ಅಂತಾ ಸಲುಗೆ ಬೆಳಸಿಕೊಳ್ಳುತ್ತಿದ್ದ ಈತ, ಬಳಿಕ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಮಾಡುತ್ತಿದ್ದ. ನಂತರ ಅದನ್ನ ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸ್ಫೋಟಕ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಪುಲಕೇಶಿ ನಗರ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಖಾಲಿ ವದಂತಿಗೆ ಜನ ಕಂಗಾಲು – ಯಾದಗಿರಿಯಲ್ಲಿ ಗ್ಯಾಸ್‌ಗೆ ಮಾರುದ್ದ ಸಾಲು

