– ಸಿಲಿಂಡರ್ & ಕುಕ್ಕರ್ ಸೇಫ್!
ತುಮಕೂರು: ಸರ್ಕಾರಿ ಶಾಲೆಯ (School) ಅಡುಗೆ ಕೋಣೆಯಲ್ಲಿ ನಿಗೂಢ ಸ್ಫೋಟ (Explosion) ಸಂಭವಿಸಿ, ಅಡುಗೆ ಸಹಾಯಕಿ ಗಾಯಗೊಂಡ ಘಟನೆ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ ಹಾಗೂ ಕುಕ್ಕರ್ ಸುರಕ್ಷಿತವಾಗಿದ್ದು, ಯಾವ ವಸ್ತು ಸ್ಫೋಟಗೊಂಡಿದೆ ಎಂದು ತಿಳಿದುಬಂದಿಲ್ಲ.
ಶಾಲೆಯ ದಾಸೋಹದ ಅಡುಗೆ ಕೋಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಗೋಡೆ ಕುಸಿದುಬಿದ್ದು, ಅಡುಗೆ ಸಹಾಯಕಿ ಲತಾ ಅವರಿಗೆ ಗಾಯವಾಗಿದೆ. ಇಂದು (ಸೆ.24) ಮಧ್ಯಾಹ್ನ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಸಬ್ ಇನ್ಸ್‌ಪೆಕ್ಟರ್ ತಲೆಗೆ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ
ಗಾಯಾಳುವನ್ನ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ಮಮತಾ, ಬಿಇಒ ಕಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತರಿಂದ ಫೋನ್ ಪೇ ಪರಿಶೀಲನೆ, ಅಧಿಕಾರಿಗಳು ತಬ್ಬಿಬ್ಬು

