– ಕಸದ ಲಾರಿಗೆ ಎಸೆಯಬೇಕಾದ ಪದಾರ್ಥಗಳ ಸೇಲ್
ಬೆಂಗಳೂರು: ಕಸದ ಲಾರಿಗೆ ಸೇರಬೇಕಾದ ಅವಧಿ ಮುಗಿದ ಪದಾರ್ಥಗಳು ಜನರ ದೇಹ ಸೇರುತ್ತಿವೆ. ಇದ್ಯಾವುದರ ಅರಿವಿಲ್ಲದೇ ಜನ ಕಡಿಮೆ ಹಣಕ್ಕೆ ಸಿಗುತ್ತಿದೆ ಅಂತ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.
ಮಾಲ್, ಮಾರ್ಟ್, ಬ್ಲಿಂಕಿಟ್, ಜೆಪ್ಟೋ ಇತರೆ ಅಂಗಡಿಗಳಲ್ಲಿ ಅವಧಿ ಮುಗಿದ ಪದಾರ್ಥಗಳನ್ನ ಕಸದ ಲಾರಿಗೆ ಎಸೆಯೋದಕ್ಕೆ ಕೊಟ್ಟರೆ, ಖದೀಮರು ಇದನ್ನೇ ಮಾರಾಟ ಮಾಡಿ ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ. ಕಸದ ಲಾರಿಗೆ ಹೋಗಬೇಕಿದ್ದ ಅವಧಿ ಮುಗಿದ, ಕೊಳೆತ ಪದಾರ್ಥಗಳನ್ನು ಜನರು ಅರಿವಿಲ್ಲದೇ ಕೊಂಡುಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮತ್ತೆ ಸುರಿದ ಮಳೆ
ಡಿಮಾರ್ಟ್, ಮಾಲ್ಗಳಿಂದ ಅವಧಿ ಮುಗಿದ ಹಾಲು, ಮೊಸರು ಮಾರಾಟ ಮಾಡಲಾಗುತ್ತಿದೆ. ಇದನ್ನ ಖರೀದಿಸಲು ಜನ ಮುಗಿಬಿದ್ದಿದ್ದಾರೆ. 20 ರೂಪಾಯಿ ಹಾಲು, ಮೊಸರು ಪ್ಯಾಕೆಟ್ನ್ನು 10 ರೂಪಾಯಿಗೆ ಮಾರಾಟ ಮಾಡಲಾಗಿದೆ.
ಕೆಎ 01, ಎಹೆಚ್ 2936 ವಾಹನದಲ್ಲಿ ವಿಲೇವಾರಿ ಪದಾರ್ಥಗಳನ್ನ ಕುಡ್ಲು ಗೇಟ್ನ ಡಿಮಾರ್ಟ್ನಿಂದ ಎಸೆಯೋದಕ್ಕೆ ತಂದ ವಾಹನವನ್ನು ದುರ್ಬಳಕೆ ಮಾಡಿಕೊಂಡು, ಅಪ್ಸರ್ ಎಂಬ ವ್ಯಾಪಾರಿ ತನ್ನ ಅಂಗಡಿಗೆ ತಂದು ಮಾರಾಟ ಮಾಡುತ್ತಿದ್ದಾನೆ.
ನೀಲಸಂದ್ರದ ಅಶೋಕ ನಗರದಲ್ಲಿ ಅಪ್ಸರ್ ಎಂಬಾತ ತನ್ನ ಅಂಗಡಿಯೊಂದರಲ್ಲಿ ಮಾಲ್, ಮಾರ್ಟ್ನಿಂದ ಅವಧಿ ಮಗಿದ ಬ್ರೆಡ್, ಬನ್, ಚಿಕನ್, ಪರೋಟ, ತರಕಾರಿ, ಹಣ್ಣುಗಳು, ಹಾಲು, ಮೊಸರು ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಇದ್ಯಾವುದರ ಅರಿವೇ ಇಲ್ಲದೇ ಜನ ಕಡಿಮೆ ಹಣಕ್ಕೆ ಸಿಗ್ತಿದೆ ಅಂತ ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ. ಮಗುವಿಗೆ ಧರಿಸುವ ಪ್ಯಾಂಪರ್ಸ್ ಕೂಡ ಅವಧಿ ಮುಗಿದಿದೆ. ಅದನ್ನೇ ಮಾರಾಟ ಮಾಡಿ ಕಾಸು ಮಾಡಿದ್ದಾನೆ. ಇದನ್ನೂ ಓದಿ: ಇಂದು ಕೊಳ್ಳೇಗಾಲಕ್ಕೆ ಸಿಎಂ – 1,500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮಾಲ್, ಮಾರ್ಟ್ಗಳ ಸಿಬ್ಬಂದಿ ಪರಿಚಯ ಮಾಡಿಕೊಂಡು ಅವಧಿ ಮುಗಿದ, ಕೊಳೆತ ಪದಾರ್ಥಗಳನ್ನು ತಂದು ಜನರಿಗೆ ತಿನ್ನಿಸಿ ಕಾಸು ಮಾಡುತ್ತಿದ್ದ ಈ ಆಸಾಮಿಯನ್ನು ಚಾಲಕರ ಒಕ್ಕೂಟದವರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.

