ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ನಿಖರ ಭವಿಷ್ಯ ಹೇಳಿದ್ದ ಟುಡೇಸ್ ಚಾಣಕ್ಯ ಈ ಬಾರಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಬಿಜೆಪಿ ಧೂಳೀಪಟ ಮಾಡಲಿದೆ ಎಂದು ಭವಿಷ್ಯ ನುಡಿದಿದೆ.
ಗುಜರಾತ್ 182 ಸ್ಥಾನಗಳಲ್ಲಿ ಬಿಜೆಪಿ 135(± 11) ಸ್ಥಾನಗಳಿಸಿದರೆ, ಕಾಂಗ್ರೆಸ್ 47(± 11), ಇತರೇ 0(±3) ಗಳಿಸಲಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶದ ಒಟ್ಟು 68 ಸ್ಥಾನಗಳ ಪೈಕಿ ಬಿಜೆಪಿ 55(± 7) ಕಾಂಗ್ರೆಸ್ 13(± 7), ಇತರೇ 0(± 3) ಸ್ಥಾನ ಸಿಗಲಿದೆ ಎಂದು ಹೇಳಿದೆ.
Advertisement
ಗುಜರಾತಿನಲ್ಲಿ ಬಿಜೆಪಿ 49%(± 3%) , ಕಾಂಗ್ರೆಸ್ 38%(± 3%), ಇತರೇ 13%(± 3%) ಮತ ಪಡೆದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 51%(± 3%), ಕಾಂಗ್ರೆಸ್ 38%(± 3%), ಇತರೇ 11%(± 3%) ಮತ ಪಡೆಯಲಿದೆ ಎಂದು ತಿಳಿಸಿದೆ.
Advertisement
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 291(± 14), ಕಾಂಗ್ರೆಸ್ 57(± 9), ಎನ್‍ಡಿಎ ಮೈತ್ರಿಕೂಟ 340( ± 14), ಯುಪಿಎ 70(± 9), ಇತರೇ 133(±11) ಸ್ಥಾನಗಳಿಸಲಿದೆ ಎಂದು ಹೇಳಿತ್ತು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿ 282, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಗುಜರಾತ್ ನಲ್ಲಿ ಒಟ್ಟು ಸ್ಥಾನಗಳು 182 ಇದ್ದು, ಮ್ಯಾಜಿಕ್ ಸಂಖ್ಯೆ 92 ಆಗಿದೆ. 2012ರ ಚುನಾವಣೆಯಲ್ಲಿ ಬಿಜೆಪಿ 115, ಕಾಂಗ್ರೆಸ್ 61, ಎನ್‍ಸಿಪಿ 2, ಜಿಪಿಪಿಒ 2, ಇತರೇ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ಎಕ್ಸಿಟ್ ಪೂಲ್: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ‘ಓಖಿ’
Advertisement