ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಐದು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದು, ಯಾರು ಅಧಿಕಾರಕ್ಕೆ ಬರಬಹುದೆಂಬ ಕುತೂಹಲ ಮನೆ ಮಾಡಿದೆ. ಸುದ್ದಿ ಸಂಸ್ಥೆಗಳು, ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ವಿವರ ಹೀಗಿದೆ.
ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‌ಗೆ ಫಲಕೊಟ್ಟಿಲ್ಲ. ಬಿಎಸ್‌ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ
ಉತ್ತರಪ್ರದೇಶ (403)
ರಿಪಬ್ಲಿಕ್
ಬಿಜೆಪಿ-262-277
ಎಸ್‌ಪಿ-119-134
ಬಿಎಸ್‌ಪಿ-7-15
ಕಾಂಗ್ರೆಸ್-3-08
ಇತರೆ-00
ಪೋಲ್‌ಸ್ಟ್ರೈಟ್
ಬಿಜೆಪಿ-211-225
ಎಸ್‌ಪಿ-146-160
ಬಿಎಸ್‌ಪಿ-14-24
ಕಾಂಗ್ರೆಸ್-4-06
ಇತರೆ-00
ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯವೆಂದರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‌ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎಎಪಿಗೆ ಗದ್ದುಗೆ ಏರಲಿದೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದು ಬಿಜೆಪಿಗೆ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಈ ಚುನಾವಣೆ ಮೇಲೆ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ರೈತ ಹೋರಾಟ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭಾ 13 ಸ್ಥಾನಗಳಿಗೆ ಮಾರ್ಚ್ 31ರಂದು ಚುನಾವಣೆ
ಪಂಜಾಬ್ (117)
ಆಕ್ಸಿಸ್ ಮೈ ಇಂಡಿಯಾ
ಕಾಂಗ್ರೆಸ್-19-31
ಎಎಪಿ-76-90
ಎಸ್‌ಎಡಿ-7-11
ಬಿಜೆಪಿ-00
ಇತರೆ-00-02
ಪೋಲ್‌ಸ್ಟ್ರೈಟ್
ಕಾಂಗ್ರೆಸ್-26
ಎಎಪಿ-58
ಎಸ್‌ಎಡಿ-24
ಬಿಜೆಪಿ-03
ಇತರೆ-06
ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು. ನಾಯಕರು ಇಲ್ಲದೇ ಇದ್ದರೂ ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ದರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಸಮೀಕ್ಷೆಯಲ್ಲಿ ಸಿಕ್ಕಿವೆ.
ಗೋವಾ(40)
ಜೀ ನ್ಯೂಸ್
ಕಾಂಗ್ರೆಸ್-14-19
ಬಿಜೆಪಿ-13-18
ಎಎಪಿ-1-3
ಇತರೆ-3-8
ಟೈಮ್ಸ್ ನೌ
ಕಾಂಗ್ರೆಸ್-16
ಬಿಜೆಪಿ-14
ಎಎಪಿ-04
ಇತರೆ-06
ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುತ್ತಾ..? ಕಾಂಗ್ರೆಸ್ ಬರುತ್ತಾ..? ಮಣಿಪುರದಲ್ಲಿ ಏನಾಗಬಹುದು ಫಲಿತಾಂಶ ಎಂಬ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿವೆ ಎಂಬುದನ್ನು ನೋಡೋಣ. ಇದನ್ನೂ ಓದಿ: ಜನೌಷಧಿ ಕೇಂದ್ರದಿಂದ ಮಧ್ಯಮ ವರ್ಗ, ಬಡವರಿಗೆ ಲಾಭ: ಮೋದಿ
ಉತ್ತರಾಖಂಡ್(70)
ಟೈಮ್ಸ್ ನೌ
ಬಿಜೆಪಿ-37
ಕಾಂಗ್ರೆಸ್-31
ಇತರೆ-02
ಸಿ ವೋಟರ್
ಬಿಜೆಪಿ-26-32
ಕಾಂಗ್ರೆಸ್-32-38
ಇತರೆ-00-02
ಮಣಿಪುರ(60)
ಜೀ ನ್ಯೂಸ್
ಬಿಜೆಪಿ-32-38
ಕಾಂಗ್ರೆಸ್-12-17
ಇತರೆ-7-14
ಇಂಡಿಯಾ ನ್ಯೂಸ್
ಬಿಜೆಪಿ-23-28
ಕಾಂಗ್ರೆಸ್-10-14