ರಾಯಚೂರು: ಅಬಕಾರಿ ಅಧಿಕಾರಿಗಳು (Excise Department) ಹಾಗೂ ಚುನಾವಣಾ ಎಫ್‍ಎಸ್‍ಟಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 70 ಲಕ್ಷ ರೂ. ಮೌಲ್ಯದ 850 ಕೆ.ಜಿ ಕಲಬೆರಿಕೆ ಸೇಂದಿ ತಯಾರಿಕೆಗೆ ಬಳಸುವ ಸಿಹೆಚ್ ಪೌಡರ್ (CH Powder) ಜಪ್ತಿ ಮಾಡಿದ ಘಟನೆ ರಾಯಚೂರಿನ (Raichur) ಕಡಗಂದೊಡ್ಡಿ ಗ್ರಾಮದಲ್ಲಿ ನಡೆದಿದೆ. ಓರ್ವ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Advertisement
ಆರೋಪಿಗಳಾದ ತಾಯನಗೌಡ ಹಾಗೂ ನರಸರಾಜು ಎಂಬುವವರ ಜಮೀನಿನಲ್ಲಿ ಸಿಹೆಚ್ ಪೌಡರ್ ಜಪ್ತಿಯಾಗಿದೆ. ಆರೋಪಿ ನರಸರಾಜುನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಮೀನಿನಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನೀರಿನ ಸಂಪ್ ರೀತಿ ನಿರ್ಮಿಸಿದ್ದ ಜಾಗದಲ್ಲಿ 32 ಚೀಲಗಳಲ್ಲಿ ತುಂಬಿಟ್ಟಿದ್ದ ಸಿಹೆಚ್ ಪೌಡರ್‍ನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್
Advertisement
Advertisement
ಆರೋಪಿಗಳು ಈಗಾಗಲೇ ಕಲಬೆರಿಕೆ ಸೇಂದಿ ತಯಾರಿಕೆ ಹಾಗೂ ಮಾರಾಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಚುನಾವಣೆ (Election) ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಗೆ ಸೇಂದಿ ಸರಬರಾಜು ಮಾಡಲು ಅಕ್ರಮವಾಗಿ ಸಿಹೆಚ್ ಪೌಡರ್ ಸಂಗ್ರಹಿಸಿರುವ ಅನುಮಾನವಿದೆ. ಆರೋಪಿಗಳ ಗಡಿಪಾರಿಗೆ ಶಿಫಾರಸು ಮಾಡಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಲಕ್ಷ್ಮಿ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ