ಅಹಮದಾಬಾದ್: ವ್ಯಕ್ತಿಯೊಬ್ಬ ಮದುವೆಯೊಂದರಲ್ಲಿ (Wedding) ಮನೆಯ ಮೇಲಿನಿಂದ 500ರೂ. ನೋಟಿನ ಹಣಗಳನ್ನು (Money) ಕೆಳಗೆ ಸುರಿದ ಘಟನೆ ಗುಜರಾತ್‍ನ (Gujarat) ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.
ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಾಜಿ ಗ್ರಾಪಂ ಅಧ್ಯಕ್ಷ ಕರೀಂ ಯಾದವ್ ಹಣವನ್ನೆಲ್ಲ ಕೆಳಗೆ ಸುರಿದಿದ್ದಾನೆ.
Advertisement
Former sarpanch showers cash at wedding event in Gujarat’s Mehsana.
A former sarpanch of a village in Gujarat’s Mehsana showered money on people gathered to witness his nephew’s wedding celebrations.
pic.twitter.com/BjkeZgKW67
— Ahmed Khabeer احمد خبیر (@AhmedKhabeer_) February 19, 2023
Advertisement
ಕರೀಂ ಯಾದವ್ ತನ್ನ ಸಹೋದರಳಿಯ ರಜಾಕ್‍ನ ಮದುವೆ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗುತ್ತಿದ್ದಂತೆ ನೂರಾರು ನಗದು ನೋಟುಗಳನ್ನು ಎಸೆದಿದ್ದಾನೆ. ಇದರಲ್ಲಿ ಅನೇಕ ನೋಟುಗಳು 500 ರೂ. ಮೌಲ್ಯದ್ದಾಗಿತ್ತು. ಕೆಳಗೆ ಬಿದ್ದಿದ್ದ ನೂರಾರು ನೋಟುಗಳನ್ನು ಬಾಚಿಕೊಳ್ಳಲು ಜನಸಮೂಹವೇ ಜಮಾಯಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಶಿವರಾತ್ರಿ ಆಚರಣೆ ವೇಳೆ ಜಾತಿ ಕಲಹ – 14 ಜನರಿಗೆ ಗಾಯ
Advertisement
ಈ ಹಿಂದೆ ಹೈದರಾಬಾದ್‍ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿವಾಹ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು 500 ರೂ. ಮುಖಬೆಲೆಯ ನೋಟುಗಳನ್ನು ರಸ್ತೆಯಲ್ಲಿ ಎಸೆದಿದ್ದರು. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪ್ರಚಾರಕ್ಕಾಗಿ 10 ಮುಖ ಬೆಲೆಯ ನೋಟುಗಳನ್ನು ತೂರಿದ್ದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ದರ್ಪ ನಡೆಯಲ್ಲ – ಕೇಂದ್ರ ಸಚಿವ ಗರಂ
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k