ಕೋಲ್ಕತ್ತಾ: ತನ್ನ ತಾಯಿಯೊಂದಿಗೆ ಸೇರಿ ನೌಕಾಪಡೆಯ (Navy) ಮಾಜಿ ಅಧಿಕಾರಿಯನ್ನು ಕೊಂದು ಆತನ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಆತನ ಮಗನೇ ನೆರೆಹೊರೆಯಲ್ಲಿ ಬಿಸಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಬರುಯಿಪುರದಲ್ಲಿ ನಡೆದಿದೆ. ಮೃತ ಅಧಿಕಾರಿ ಪತ್ನಿ ಹಾಗೂ ಮಗನನ್ನು ಪೊಲೀಸರು (Police) ಬಂಧಿಸಿದ್ದಾರೆ.
ನೌಕಾಪಡೆಯ (Navy) ಮಾಜಿ ಅಧಿಕಾರಿ ಉಜ್ವಲ್ ಚಕ್ರವರ್ತಿ (55) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೇಸರಿ, ಕುಂಕುಮ ಕಂಡ್ರೆ ಆಗಲ್ಲ; ಕಾಂಗ್ರೆಸ್‌ನಿಂದಲೇ ಮತಾಂತರಕ್ಕೆ ಕುಮ್ಮಕ್ಕು – ಸಿ.ಟಿ ರವಿ ಕಿಡಿ
Advertisement
Advertisement
ಪೊಲೀಸರ ಪ್ರಕಾರ, ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದ (Polytechnic Student) ತನ್ನ ಮಗ ಹಾಗೂ ತಂದೆ ಉಜ್ವಲ್ ನಡುವೆ ಜಗಳವಾಗಿತ್ತು. ಈ ವೇಳೆ ಮಗ ತಂದೆಯನ್ನು ತಳ್ಳಿದಾಗ ಅಲ್ಲೇ ಇಟ್ಟಿದ್ದ ಕುಚಿಗೆ ತಲೆ ಹೊಡೆದುಕೊಂಡು ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಮಗ ತಂದೆಯ ಕತ್ತು ಹಿಸುಕಿ ಕೊಂದಿದ್ದಾನೆ. ಕೊಂದ ನಂತರ ಹೆಂಡತಿ ಮತ್ತು ಮಗ ಮೃತದೇಹವನ್ನು ಸ್ನಾನದ ಗೃಹಕ್ಕೆ ಕೊಂಡೊಯ್ದಿದ್ದಾರೆ. ಆಮೇಲೆ ಮಗ ತನ್ನ ಕಾರ್ಪೆಂಟರಿ ಕ್ಲಾಸ್ ಕಿಟ್‌ಬ್ಯಾಗ್‌ನಿಂದ ಹೆಕ್ಸಾ (ಮಿನಿ ಗರಗಸ) ಬಳಸಿ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ, ಮನೆಯಿಂದ ಸುಮಾರು 500 ಮೀ. ದೂರದಲ್ಲಿ ವಿವಿಧೆಡೆ ಎಸೆದು ಬಂದಿದ್ದಾನೆ. ಮಗ ಪ್ಲಾಸ್ಟಿಕ್‌ನಿಂದ ಸುತ್ತಿದ ದೇಹದ ಭಾಗಗಳನ್ನು 6 ಬಾರಿ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದಾನೆ.
Advertisement
Advertisement
ಆ ಬಳಿಕ ಬುರುಯಿಪುರ್ ಠಾಣೆಗೆ ತೆರಳಿ ಕಾಣೆಯಾಗಿದ್ದಾರೆ ಅನ್ನೋ ಬಗ್ಗೆ ದೂರು ದಾಖಲಿಸಲು ಠಾಣೆಗೆ ತೆರಳಿದ್ದಾರೆ. ಈ ವೇಳೆ ಅವರ ನಡವಳಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದೆ. ನವೆಂಬರ್ 15ರಂದು ನಾಪತ್ತೆಯಾದ ವೈಯಕ್ತಿಕ ಡೈರಿಯನ್ನು ಪರಿಶೀಲಿಸಿದಾಗ ತಾಯಿ ಮತ್ತು ಮಗ ಇಬ್ಬರ ಮೇಲೂ ಸಂಶಯ ವ್ಯಕ್ತವಾಗಿದೆ. ವಿಚಾರಣೆ ನಡೆಸಿದಾಗ ಅಂತಿಮವಾಗಿ ಮಗ ಅಪರಾಧ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್ ಫ್ಯಾನ್ಸ್
ಉಜ್ವಲ್ ಚಕ್ರವರ್ತಿ ತನ್ನ ಮಗನಿಗೆ ಪರೀಕ್ಷಾ ಶುಲ್ಕಕ್ಕಾಗಿ 3 ಸಾವಿರ ಹಣ ಕೊಡಲು ನಿರಾಕರಿಸಿದ್ದರು. ಆಗ ಇಬ್ಬರ ನಡುವಿನ ಜಗಳದಲ್ಲಿ ಉಜ್ವಲ್ ಮಗನ ಕಪಾಳಕ್ಕೆ ಹೊಡೆದಿದ್ದಾರೆ. ಪ್ರತಿಕಾರವಾಗಿ ಮಗ ತಂದೆಯನ್ನು ತಳ್ಳಿದ್ದಾನೆ. ಈ ವೇಳೆ ತಲೆ ಕುರ್ಚಿಗೆ ಹೊಡೆದುಕೊಂಡು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಮಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.