LatestLeading NewsMain PostNational

ಒಟ್ಟಿಗೆ ಕೂತು ಫಿಫಾ ವಿಶ್ವಕಪ್‌ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್‌ ಫ್ಯಾನ್ಸ್‌

ತಿರುವನಂತಪುರ: ಫಿಫಾ ವಿಶ್ವಕಪ್‌ 2022 (FIFA World Cup) ಕತಾರ್‌ನಲ್ಲಿ (Qatar) ಇಂದಿನಿಂದ ಪ್ರಾರಂಭವಾಗಿದ್ದು, ಆಟವನ್ನು ಒಟ್ಟಿಗೆ ವೀಕ್ಷಿಸಲು ಫುಟ್‌ಬಾಲ್‌ (Football) ಅಭಿಮಾನಿಗಳ ತಂಡವೊಂದು 23 ಲಕ್ಷ ರೂ. ಮನೆಯನ್ನೇ ಖರೀದಿಸಿದ್ದಾರೆ.

ಕೇರಳದ (Kerala) ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು 23 ಲಕ್ಷಕ್ಕೆ ಮನೆಯೊಂದನ್ನು ಖರೀದಿಸಿದ್ದಾರೆ. ಇದರಿಂದಾಗಿ ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಫಿಫಾ ಪಂದ್ಯಗಳನ್ನು ವೀಕ್ಷಿಸಬಹುದು. ಫುಟ್ಬಾಲ್ ಸ್ನೇಹಿತರು ಹೊಸದಾಗಿ ಖರೀದಿಸಿದ ಮನೆಯನ್ನು ವಿಶ್ವಕಪ್‌ನಲ್ಲಿ ಭಾಗವಹಿಸುವ 32 ತಂಡಗಳ ಧ್ವಜಗಳ ಜೊತೆಗೆ ಫುಟ್‌ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದಾರೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯ ದೂರದರ್ಶನವನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಗೆಳತಿ ಕೊಂದು, ಮೃತದೇಹವನ್ನು 4 ದಿನ ಮೆಡಿಕಲ್ ಸ್ಟೋರ್‌ನಲ್ಲೇ ಇಟ್ಕೊಂಡಿದ್ದ ಕಿಲ್ಲರ್

“ನಾವು FIFA ವಿಶ್ವಕಪ್‌ಗಾಗಿ ವಿಶೇಷವಾದದ್ದನ್ನು ಮಾಡಲು ಯೋಜಿಸಿದ್ದೆವು. ನಾವು 17 ಮಂದಿ ಸೇರಿ ಈಗಾಗಲೇ 23 ಲಕ್ಷಕ್ಕೆ ಮನೆಯನ್ನು ಖರೀದಿಸಿದ್ದೇವೆ. ಅದನ್ನು FIFA ತಂಡಗಳ ಧ್ವಜಗಳಿಂದ ಅಲಂಕರಿಸಿದ್ದೇವೆ. ನಾವು ಇಲ್ಲಿ ಒಟ್ಟಿಗೆ ಸೇರಲು ಮತ್ತು ಪಂದ್ಯವನ್ನು ವೀಕ್ಷಿಸಲು ಯೋಜಿಸಿದ್ದೇವೆ ಎಂದು ಶೆಫೀರ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಯೂ ಈ ಕೂಟವನ್ನು ಆನಂದಿಸಬಹುದು. ಅವರ ಒಗ್ಗಟ್ಟು ಮುಂದುವರಿಯುತ್ತದೆ. ನಾವು ದೊಡ್ಡ ಟಿವಿ ಖರೀದಿಸಲು ಯೋಜಿಸುತ್ತಿದ್ದೇವೆ. ಎಲ್ಲಾ ವಯೋಮಾನದವರು ಇಲ್ಲಿಗೆ ಬಂದು ಒಟ್ಟಿಗೆ ಆಟವನ್ನು ಆನಂದಿಸಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ದಿ ಮೋಸ್ಟ್ ವಾಟೆಂಡ್ ಭಯೋತ್ಪಾದಕ ಹತ್ಯೆ

FIFA ವಿಶ್ವಕಪ್ ಕತಾರ್‌ನಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭವು ಇಂದು ಸಂಜೆ 7:30 ಕ್ಕೆ ಪ್ರಾರಂಭವಾಗಿದೆ.

Live Tv

Leave a Reply

Your email address will not be published. Required fields are marked *

Back to top button