– ಪೆನ್ ಡ್ರೈವ್ ಹಂಚಲು ಹತ್ತಾರು ಕೋಟಿ ಖರ್ಚು
– ಪ್ರಕರಣದಲ್ಲಿ ಮೂರ್ನಾಲ್ಕು ಆತ್ಮಹತ್ಯೆ ಆಗಿದೆ ಅನ್ನೋ ಮಾಹಿತಿ
ಮಂಡ್ಯ: ಪೆನ್‍ಡ್ರೈವ್ ಕೇಸಲ್ಲಿ (Pendrive Case) ಡಿಕೆಶಿ ಕೈವಾಡ ಇರೋದು 100ರಷ್ಟು ಸತ್ಯ. ಶಿವರಾಮೇಗೌಡರಿಗೆ ಕೈ ಪ್ರಭಾವಿ ನಾಯಕ 5 ಕೋಟಿ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹೊಸ ಬಾಂಬ್ ಸಿಡಿಸಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡಿಗಾಗಿ, ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡುವಂತ ವ್ಯಕ್ತಿ ಶಿವರಾಮೇಗೌಡ . ಆತನ ಹೆಸರು ಹೇಳಿದರೆ ನಮ್ಮ ನಾಲಿಗೆಗೆ ಹುಳ ಬೀಳುತ್ತದೆ. ಅಂತಹ ಕೆಟ್ಟ ವ್ಯಕ್ತಿ ಮನುಷ್ಯನಾಗಿ ಹುಟ್ಟಲೇಬಾರದಿತ್ತು. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ಲಾನ್ ಮಾಡಿದ್ರು. ಈಗ ಡಿಕೆ ಶಿವಕುಮಾರ್ ಮುಗಿಸಲು ಕ್ರಾಂಟ್ರಾಕ್ಟ್ ಪಡೆದಿರುವ ಬಗ್ಗೆ ಅನುಮಾನ ಇದೆ. ಪ್ರಜ್ವಲ್ ಪೆನ್ ಡ್ರೈವ್ ವಿಚಾರದಲ್ಲಿ ಡಿಕೆಶಿ ಕೈವಾಡ ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಉಪಯೋಗಿಸಿಕೊಂಡು ಅವರನ್ನ ಮುಗಿಸಲು ಪ್ಲಾನ್ ನಡೆದಿದೆ ಎಂದು ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ. ಡಿಕೆಶಿ ಜೈಲಿಗೆ ಹೋದರೆ ನಾನು ನಾಯಕ ಆಗಬಹುದು ಎಂಬ ಆಲೋಚನೆ ಹಲವರಲ್ಲಿದೆ. ಹಾಗಾಗಿ ಈ ಕೆಲಸಕ್ಕೆ ಶಿವರಾಮೇಗೌಡ (Shivarame Gowda) ಒಬ್ಬ ಏಜೆಂಟ್. ಒಬ್ಬರನ್ನು ತುಳಿಯಲು ಮತ್ತೊಬ್ಬರಿಗೆ ಕಾಂಟ್ರಾಕ್ಟ್. ಕಾಂಗ್ರೆಸ್ ಪ್ರಭಾವಿ ನಾಯಕ ಶಿವರಾಮೇಗೌಡರಿಗೆ 5 ಕೋಟಿ ಕೊಟ್ಟಿದ್ದಾರೆ. ಎಚ್ಡಿಕೆ ನಾಮಪತ್ರ ಸಲ್ಲಿಸುವ 15 ದಿನ ಮುಂಚೆ ಹಣ ವರ್ಗಾವಣೆ ಆಗಿದೆ. ಆ ವಿಚಾರ ಕೇಳಿದಾಗ ಅನುಮಾನ ಮೂಡಿತ್ತು. ಈ ವ್ಯಕ್ತಿ ಅಷ್ಟು ಬೆಲೆ ಬಾಳುವುದಿಲ್ಲ ಮತ್ಯಾಕೆ ಹಣ ಕೊಟ್ಟಿದ್ದಾರೆ ಎಂದು ಸಂಶಯ. ಈಗ ಸಂಶಯ ನಿಜವಾಗಿದೆ ಎಂದರು. ಇದನ್ನೂ ಓದಿ: ಪ್ರಜ್ವಲ್ ಕೇಳಿದ್ದ ಕಾಲಾವಕಾಶ ಇಂದಿಗೆ ಅಂತ್ಯ – ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಎಸ್‌ಐಟಿ ನಿಗಾ
Advertisement
Advertisement
ಪೆನ್ ಡ್ರೈವ್ ಹಂಚಲು ಹತ್ತಾರು ಕೋಟಿ ಖರ್ಚಾಗಿದೆ. ಅದರಲ್ಲಿ 5 ಕೋಟಿ ಶಿವರಾಮೇಗೌಡರಿಗೆ ಬಂದಿದೆ. ಪೆನ್ ಡ್ರೈವ್ ಕೊಂಡುಕೊಳ್ಳುವುದಕ್ಕಾ?, ಮಾಫಿರ್ಂಗ್ ಮಾಡಿಸುವುದಕ್ಕಾ? ಅಥವಾ ಹಂಚುವುದಕ್ಕಾ?. ಕೊಟ್ಟವರು, ಇಸ್ಕೊಂಡವರು ಈ ಬಗ್ಗೆ ಹೇಳಬೇಕು. ಎಲ್ಲರ ಮನೆಮುಂದೆ ಸಿಸಿಟಿವಿ ಇದೆ ಚೆಕ್ ಮಾಡಲಿ. ಪೆನ್ ಡ್ರೈವ್ ಮಾರ್ಫಿಂಗ್ ಮಾಡಿ, ಹಂಚಲು ದುಡ್ಡು ವರ್ಗಾವಣೆ ಮಾಡಲು ಹಣ ಕೊಟ್ಟಿದ್ದಾರೆ. ನಾಗಮಂಗಲದಲ್ಲೂ ಪೆನ್ ಡ್ರೈವ್ ಹಂಚಿಕೆಯಾಗಿದೆ ಎಂದು ಸುರೇಶ್ ಗೌಡ ಗರಂ ಆದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ: ಇದೆ ವೇಳೆ ಸರ್ಕಾರದ ವಿರುದ್ದವೂ ಗರಂ ಆದ ಸುರೇಶ್ ಗೌಡ, ಕಾಂಗ್ರೆಸ್ ಸರ್ಕಾರ (Congress Govt) ಹೆಣ್ಣುಮಕ್ಕಳ ಮಾನ ಬೀದಿಗೆ ತಂದಿದೆ. ಪ್ರಜ್ವಲ್ ಮಾಡಿದ ಅಪರಾಧಕ್ಕಿಂತ ಘೋರ ಅಪರಾಧ ಈ ಸರ್ಕಾರ ಮಾಡಿದೆ. 4 ಗೋಡೆಗಳ ಮಧ್ಯೆ ನಡೆದ ವಿಷಯವನ್ನ ಪೆನ್ ಡ್ರೈವ್ ಮಾಡಿ ಹಂಚಿದ್ದಾರೆ. ಇದು ಮಹಾನ್ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಎಷ್ಟೋ ಹೆಣ್ಣುಮಕ್ಕಳ ಸಂಸಾರದಲ್ಲಿ ಬಿರುಕಾಗಿದೆ. ಈ ಪ್ರಕರಣದಲ್ಲಿ 3-4 ಆತ್ಮಹತ್ಯೆ ಆಗಿದೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ವೀಡಿಯೋದಲ್ಲಿ ಭಾಗಿಯಾದವರು ಎನ್ನಲಾದ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಲಾಗ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಆ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಹಣಕ್ಕಾಗಿ, ಬೇರೆ ರೀತಿ ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಎಸ್‍ಐಟಿ ತನಿಖೆ ನ್ಯಾಯಯುತವಾಗಿ ನಡೆಯುತ್ತಿಲ್ಲ. ಸತ್ಯವನ್ನು ಮರೆಮಾಚಲಾಗ್ತಿದೆ. ಸಂತ್ರಸ್ತೆಯರಿಗೆ ಎಸ್‍ಐಟಿ (SIT) ನ್ಯಾಯ ಕೊಡುವುದಿಲ್ಲ. ಈ ಪ್ರಕರಣವನ್ನ ರಾಜಕೀಯ, ಚುನಾವಣೆಗಾಗಿ ಮಾತ್ರ ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನ್ಯಾಯ ಸಿಗುವವರೆಗೂ, ಸಿಬಿಐಗೆ (CBI) ವಹಿಸುವವರೆಗೂ ಜೆಡಿಎಸ್ (JDS) ಹೋರಾಟ ಮಡಲಿದೆ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನ ತಂದು ಅವಮಾನ ಮಾಡಿದ್ದಾರೆ. ಇದು ರಾಜದ್ರೋಹದ ಕೆಲಸ. ಯಾವುದೇ ವಿಷ್ಯದಲ್ಲೂ ಭಾಗಿಯಾಗದ ದೇವೇಗೌಡರ ಹೆಸರನ್ನು ಎಳೆತಂದಿದ್ದಾರೆ. ಕಾಂಗ್ರೆಸ್ ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಿದೆ. ಆತ್ಮಹತ್ಯೆ ಮಾಡಿಕೊಂಡವರು, ಡಿವೋರ್ಸ್ ಆದವರು, ಮನೆ ಹಾಳು ಮಾಡಿಕೊಂಡವರ ವಿಚಾರ ಮುಂದೆ ತಿಳಿಯಲಿದೆ. ಹೆಚ್ಚು ಈ ವಿಚಾರಗಳನ್ನು ಸರ್ಕಾರ ಮುಚ್ಚಿಡಲು ಆಗಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಆಕ್ರೋಶ ಹೊರ ಹಾಕಿದರು.