ಉಡುಪಿ: ಕಳೆದ ಡಿಸೆಂಬರ್ ತಿಂಗಳಲ್ಲಿ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ದೋಣಿಯ ಅವಶೇಷ ಪತ್ತೆಯಾಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ನೌಕಾಸೇನೆಯೇ ಕೊಲೆ ಮಾಡಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯ ಮೀನುಗಾರಿಕಾ ದೋಣಿಯ ಅವಶೇಷ ಪತ್ತೆ ವಿಚಾರ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕಾಸೇನೆ ಏಳು ಮೀನುಗಾರರ ಕೊಲೆ ಮಾಡಿದೆ. ಭಾರತೀಯ ನೌಕಾಸೇನೆಯ ನೌಕೆಯೇ ದೋಣಿಗೆ ಢಿಕ್ಕಿ ಹೊಡೆದಿದೆ. ನೌಕಾಸೇನಾ ಸಿಬ್ಬಂದಿ ಏಳು ಮೀನುಗಾರರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ
Advertisement
Advertisement
ಪ್ರಕರಣ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇಮಕವಾಗಲಿ. ಬಿಜೆಪಿಯವರು ಮೀನುಗಾರರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದೇನೆ. ಮೀನುಗಾರ ಕುಟುಂಬಕ್ಕೆ ಕನಿಷ್ಟ 10 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.