ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ರಾಜಕಾರಣಿಯೂ ಆಗಿರುವ ಸೊನಾಲಿ ಪೋಗಟ್ ಇದೇ ಸೋಮವಾರ ಗೋವಾದಲ್ಲಿ ನಿಧನರಾಗಿದ್ದರು. ಅವರ ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿತ್ತು. ಆದರೆ, ಈ ಕಾರಣವನ್ನು ಸೊನಾಲಿ ಸಹೋದರ ರಿಂಕು ಢಾಕಾ ಅಲ್ಲಗಳೆದಿದ್ದಾರೆ. ನನ್ನ ಸಹೋದರಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮೂಲತಃ ಹರ್ಯಾಣದವರಾದ ಸೊನಾಲಿ, ತಮ್ಮ ಸಿಬ್ಬಂದಿಗಳ ಜೊತೆ ಗೋವಾ ಪ್ರವಾಸದಲ್ಲಿ ಇದ್ದರು. ಈ ವೇಳೆಯಲ್ಲೇ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸೊನಾಲಿ ಕುಟುಂಬ ಕೂಡ ಹೃದಯಾಘಾತದಿಂದ ಆಕೆ ನಿಧನರಾಗಿಲ್ಲ ಎಂದು ಹೇಳುತ್ತಿದ್ದಾರೆ. ಈ ಸಾವಿನಲ್ಲಿ ಸಾಕಷ್ಟು ಅನುಮಾನಗಳನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಸೊನಾಲಿ ಸಾವಿನ ಒಂದು ಗಂಟೆ ಮುಂಚೆ ತನ್ನ ತಾಯಿಯೊಂದಿಗೆ ಫೋನ್ ನಲ್ಲಿ ಮಾತನಾಡಿರುವುದಾಗಿ ಸಹೋದರ ತಿಳಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ
ಸೊನಾಲಿ ಸಾವಿನ ಮುಂಚೆ ನನ್ನ ತಾಯಿಯ ಜೊತೆ ಮಾತನಾಡಿದ್ದಾರೆ. ಅಲ್ಲದೇ, ಸೊನಾಲಿ ಇದ್ದ ಜಾಗದ ಸಿಸಿಟಿವಿ ದೃಶ್ಯಗಳಿಲ್ಲ. ಮತ್ತೆ ಹರ್ಯಾಣದಲ್ಲಿ ಆಕೆ ಇದ್ದ ಫಾರ್ಮ್ ಹೌಸ್ ನಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳು ಕಣ್ಮರೆಯಾಗಿವೆ. ಹೀಗಾಗಿ ವ್ಯವಸ್ಥಿತವಾಗಿ ಸೊನಾಲಿಯಲ್ಲಿ ಕೊಲೆ ಮಾಡಿ, ಹೃದಯಾಘಾತ ಎಂದು ನಂಬಿಸಲಾಗುತ್ತಿದೆ. ಸೂಕ್ತ ತನಿಖೆ ಮಾಡಿ, ಸತ್ಯಾಸತ್ಯತೆಯನ್ನು ತಿಳಿಸಬೇಕು ಎಂದು ಗೋವಾ ಸರಕಾರಕ್ಕೆ ರಿಂಕು ಢಾಕಾ ಮನವಿ ಮಾಡಿದ್ದಾರೆ.