ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ (Kogilu Layout) ಇರೋರು ಎಲ್ಲರೂ ಬಾಂಗ್ಲಾದೇಶದವರೇ. ಅಕ್ರಮವಾಗಿ ರಾಜ್ಯಕ್ಕೆ ಬಂದಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಆಗ್ರಹ ಮಾಡಿದ್ದಾರೆ.
ಕೋಗಿಲು ಲೇಔಟ್ ಅಕ್ರಮ ನಿವಾಸಿಗಳಿಗೆ ಮನೆ ಕೊಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೋಗಿಲು ಲೇಔಟ್‌ನಲ್ಲಿ ಇರೋರು ಎಲ್ಲರೂ ಬಾಂಗ್ಲಾದೇಶದವರೇ. ಕರ್ನಾಟಕದಲ್ಲಿ 25 ಲಕ್ಷಕ್ಕಿಂತ ಜಾಸ್ತಿ ಜನ ಬಾಂಗ್ಲಾದೇಶದವರು ಇದ್ದಾರೆ. ಸರ್ಕಾರ ಹೌದೋ ಇಲ್ಲವೋ ಅಂತ ಸ್ಪಷ್ಟಪಡಿಸಲಿ. ಬಾಂಗ್ಲಾದೇಶದವರು ಇಲ್ಲಿ ಇರೋದು ದೊಡ್ಡ ರಾಕೆಟ್. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಆತಂಕ ಸ್ಥಿತಿ ನಿರ್ಮಾಣ ಮಾಡ್ತಾ ಇದ್ದಾರೆ. ಮನೆ ಕೊಡೋದು ಬಿಡಿ. ಇವರೆಲ್ಲಾ ಬಾಂಗ್ಲಾದೇಶವರು. ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ. ಸರ್ಕಾರ ಬಾಂಗ್ಲಾದೇಶದವರ ಬಗ್ಗೆ ಮಾತಾಡಲಿ. ಅದು ಬಿಟ್ಟು ನಾಟಕ ಮಾಡ್ತಾ ಇದ್ದಾರೆ. ಕೋಗಿಲು ಲೇಔಟ್‌ನಲ್ಲಿ ಇರೋರು ನಮ್ಮ ದೇಶದವರೇ ಅಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಕೋಗಿಲು ಲೇಔಟ್‌ಗೆ ಅಕ್ರಮವಾಗಿ ಜನ ಹೇಗೆ ಬಂದರು ತನಿಖೆ ಆಗಲಿ: ಸುರೇಶ್ ಕುಮಾರ್
ಕೇರಳ ಸಿಎಂ ಹೇಳಿಕೆ ಕೊಟ್ಟರು. ಕೋಗಿಲು ಲೇಔಟ್‌ನಲ್ಲಿ ಯಾರು ಕೇರಳದವರು ಇಲ್ಲ. ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿಂದ ಕೇರಳಗೆ, ಆಂಧ್ರಗೆ ಬರ್ತಾರೆ. ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ. ಇದರ ಬಗ್ಗೆ ಸರ್ಕಾರ ಮಾತಾಡಲಿ. 25 ಲಕ್ಷ ಜನ ಬಾಂಗ್ಲಾದೇಶದವರು ಇಲ್ಲಿ ಇದ್ದಾರೆ. ನಾನು ಹೇಳೋದು ಸುಳ್ಳು ಆದರೆ ಸರ್ಕಾರ ಹೇಳಲಿ. ಈ ಬಾಂಗ್ಲಾದೇಶವರು ಎಲ್ಲಾ ದಾಖಲಾತಿ ಮಾಡಿಸಿಕೊಂಡಿದ್ದಾರೆ. ಈ ನುಸುಳುಕೋರರನ್ನ ಹಿಡಿದು ವಾಪಸ್ ಬಾಂಗ್ಲಾದೇಶಕ್ಕೆ ಕಳಿಸೋ ಕೆಲಸ ಸರ್ಕಾರ ಮಾಡಬೇಕು. ಮಿನಿ ಬಾಂಗ್ಲಾದೇಶ ಕರ್ನಾಟಕ, ಬೆಂಗಳೂರಿನಲ್ಲಿ ನಿರ್ಮಾಣ ಮಾಡ್ತಾ ಇದ್ದಾರೆ. ಇಲ್ಲಿ ಇರೋರು ಬಾಂಗ್ಲಾದೇಶದವರು. ನಾವು ಹೋದಾಗ ಬೇರೆ ಅವರನ್ನು ಕೂರಿಸಿದ್ದಾರೆ. ಈ ರಾಕೆಟ್ ಹಿಂದೆ ಯಾರಿದ್ದಾರೆ. ವಾಸೀಂ ಹಿಂದೆ ಯಾರ್ ಇದ್ದಾರೆ. ಈ ಜಾಲದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಮನೆ ಕೊಟ್ಟು ದೇಶಕ್ಕೆ ಮಾದರಿಯಾಗಿದೆ ಎಂಬ ವೇಣುಗೋಪಾಲ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಬಾಂಗ್ಲಾದೇಶದವರನ್ನ ಕರೆದುಕೊಂಡು ಬಂದಿರೋದು ಆದರ್ಶನಾ? ಬಾಂಗ್ಲಾದೇಶದವರು ಅಲ್ಲಿಗೆ ಅಕ್ರಮವಾಗಿ ಬಂದಿದ್ದಾರೆ. ಕಾನೂನುಬಾಹಿರವಾಗಿ ಬಂದವರಿಗೆ ನೆಲೆ ಕೊಟ್ಟಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಮನೆ ಕೋಡೋದು ಆದರ್ಶನಾ? ಕರ್ನಾಟಕದಲ್ಲಿ ಆಡಳಿತ ಮಾಡ್ತಿರೋದು ವೇಣುಗೋಪಾಲ್ ಹಾ ಅಥವಾ ಕಾಂಗ್ರೆಸ್ ಸರ್ಕಾರನಾ ಎಂದು ಪ್ರಶ್ನಿಸಿದರು.
ಅಕ್ರಮವಾಗಿ ಇರೋರ ಬಳಿ ಏನ್ ದಾಖಲಾತಿ ಇದೆ? ಕಂದಾಯ ಇಲಾಖೆ ಕೊಡಲಿ. ಅಲ್ಲಿ ಸುತ್ತಮುತ್ತಲಿನ ಮನೆಯೂ ಸಕ್ರಮ ಅಲ್ಲ. ಯಾರೂ ಅರ್ಹರು ಅಲ್ಲ. ರಾಜೀವ್ ಗಾಂಧಿ ವಸತಿ ಯೋಜನೆ ಮನೆ ರೇಟ್ ಬಗ್ಗೆಯೂ ಈ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: 6,322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ – ಕಾಮಗಾರಿ ಚುರುಕುಗೊಳಿಸಲು ಸಚಿವ ಬೋಸರಾಜು ಸೂಚನೆ
ಬಿಜೆಪಿಯಿಂದ ಲೀಗಲ್ ಫೈಟ್ ಮಾಡುವ ವಿಚಾರಕ್ಕೆ ಸರ್ಕಾರ ಸತ್ತು ಹೋಗಿದೆ ಅಂತ ಹೇಳಲಿ. ನಾವು ನ್ಯಾಯಾಲಯಕ್ಕೆ ಹೋಗ್ತೀವಿ. ನಮ್ಮಲ್ಲಿ ಆಡಳಿತ ಇಲ್ಲ, ಸತ್ತ ಸರ್ಕಾರ ಅಂತ ಹೇಳಲಿ. ಆಗ ನ್ಯಾಯಾಲಯಕ್ಕೆ ಹೋಗ್ತೀವಿ. ಕೋಗಿಲು ಲೇಔಟ್‌ನಲ್ಲಿ ಇರೋರು ಎಲ್ಲರೂ ಬಾಂಗ್ಲಾದೇಶದವರೇ. ನಾನು ಬೇಕಾಬಿಟ್ಟಿ ಹೇಳಿಕೆ ಕೊಡ್ತಿಲ್ಲ. ಜವಾಬ್ದಾರಿಯಿಂದ ಮಾತಾಡ್ತಾ ಇದ್ದೇನೆ. ಬಾಂಗ್ಲಾದೇಶದವರು ಅಕ್ರಮವಾಗಿ ಇಲ್ಲಿಗೆ ಬಂದಿದ್ದಾರೆ. ತನಿಖೆ ಮಾಡುವ ಯೋಗ್ಯತೆ ಇಲ್ಲ ಅಂದರೆ ಇದರ ತನಿಖೆಗೆ NIA ಸರ್ಕಾರ ಕೊಡಲಿ ಎಂದು ಆಗ್ರಹಿಸಿದರು.
ನಾಳೆ ಮನೆ ಹಂಚಿಕೆ ಬಗ್ಗೆ ಸಚಿವ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಮೀರ್‌ರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಮೊದಲು ಬಾಂಗ್ಲಾದೇಶದವರಾ ಇಲ್ಲವಾ ಅಂತ ಸರ್ಕಾರ ಹೇಳಲಿ. ವಸತಿ ಸಚಿವರು, ಮನೆ ಹೇಗೆ ಕೊಡ್ತಾರೆ ಅವೆಲ್ಲ ಮಾತಾಡೋಣ. ಈಗ ಇವರು ಕೊಡ್ತಿರೋ ಮನೆ ಯಾರಿಗೆ ಅಲಾಟ್ ಆಗಿತ್ತು ಜಮೀರ್ ಹೇಳಲಿ. ಜಮೀರ್‌ಗೆ ಆ ಮನೆ ರೇಟ್ ಕೂಡಾ ಗೊತ್ತಿಲ್ಲ. ನಿಜವಾಗಿ ಅರ್ಜಿ ಹಾಕಿರೋರಿಗೆ ಸಾಲ, ಮನೆ ಕೊಡಿಸೋಕೆ ಆಗಿಲ್ಲ. ಬಾಂಗ್ಲಾದೇಶದವರಿಗೆ ಮನೆ ಕೊಡಿಸೋಕೆ ನಾ ಮುಂದು ತಾ ಮುಂದು ಅಂತ ಬರ್ತಾ ಇದ್ದಾರೆ. ವೇಣುಗೋಪಾಲ್‌ರನ್ನ ಒಲಿಸಿಕೊಳ್ಳೋಕೆ ಇದನ್ನ ಮಾಡ್ತಾ ಇದ್ದಾರೆ. ಸೊಂಟ ಇಲ್ಲದ, ಧ್ವನಿ ಇಲ್ಲದ ಅಸಹಾಯಕ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

