– ಭಾರತಕ್ಕೆ ಬೇಕಾಗಿದ್ದ ಉಗ್ರರನ್ನು ಹೊಡೆದಿದ್ದೇವೆ
ಹುಬ್ಬಳ್ಳಿ: ಇನ್ನು ಮುಂದೆ ಪಾಕಿಸ್ತಾನ ಕೆಮ್ಮಿದ್ರೆ ಸಾಕು, ಭಾರತೀಯ ಸೇನೆ(Indian Army) ಪಾಕ್ ಬಾರ್ಡರಿಗೆ ನುಗ್ಗುತ್ತದೆ ಎಂದು ದೊಡ್ಡ ಸಂದೇಶವನ್ನು ಜಗತ್ತಿಗೆ ಭಾರತ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಹೇಳಿದರು.
ಹುಬ್ಬಳ್ಳಿಯಲ್ಲಿ(Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವದ ನಾಲ್ಕನೇ ಅತಿ ದೊಡ್ಡ ಮಿಲಿಟರಿ ಹೊಂದಿರುವುದು ಭಾರತ ವಿಶ್ವಸಂಸ್ಥೆಯ ನಿಯಮಗಳನ್ನು ಧಿಕ್ಕರಿಸಿ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದ್ದೇವೆ. ಬಹಳಷ್ಟು ಸಂಖ್ಯೆ ಹೇಳಲ್ಲ. ಆದ್ರೆ ಭಾರತಕ್ಕೆ ಬೇಕಾದ ಉಗ್ರರಲ್ಲಿ ಒಂದಿಬ್ಬರನ್ನು ಬಿಟ್ರೆ ಎಲ್ಲಾ ಉಗ್ರರನ್ನು ಹೊಡೆದಿದ್ದೇವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾಕ್ ಡ್ರಿಲ್‌ನಲ್ಲಿ ಸ್ವದೇಶಿ ನಿರ್ಮಿತ ಫೈರ್ ಬೋಟ್ ಬಳಕೆ
ಭಾರತ ಅಭಿವೃದ್ಧಿಯನ್ನು ಹೊಂದುತ್ತಿದೆ. ಆದರೆ ಇದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಮೀಸಲಾತಿ, ಸಂವಿಧಾನದ ಬದಲಾವಣೆ ಮಾಡುತ್ತದೆ ಎಂದು ದೇಶದೊಳಗೆ ಆಂತರಿಕ ಸಮಸ್ಯೆ ಹುಟ್ಟುಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ
ಸದ್ಯಕ್ಕೆ ಕದನ ವಿರಾಮ ಆಗಿದೆ. ಈಗಾಗಲೇ ನಾವು ಭಯೋತ್ಪಾದನೆಯ ವಿರುದ್ಧ ಯುದ್ಧ(War on Terror) ಎಂದು ಪರಿಗಣಿಸಿದ್ದೇವೆ. ಉಗ್ರರು ಶುದ್ಧರಾಗಿಲ್ಲ. ಮೂರ್ನಾಲ್ಕು ದಿನಗಳ ಆಪರೇಷನ್‌ನಲ್ಲಿ ಉಗ್ರರ ಅಡಗುತಾಣ, ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಅಮೆರಿಕ ಮಧ್ಯಸ್ಥಿಕೆ ಕುರಿತು ಈಗಾಗಲೇ ಹೇಳಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ದೇಶ ಒಂದಾಗಿರಬೇಕು ಎಂದು ವಿಪಕ್ಷಗಳಿಗೆ ಮನವಿ ಮಾಡುತ್ತೇನೆ. ಎಲ್ಲಿ ಏನಾಗಿದೆ ಎನ್ನುವುದನ್ನು ತಿಳಿದು ಶಿವಸೇನಾ ಮುಖಂಡರು ಮಾತನಾಡಬೇಕು. ಭಾರತ ಮತ್ತು ಪಾಕಿಸ್ತಾನದ(Pakistan) ಡಿಜಿಎಂ ಮಾತುಕತೆ ಮೇಲೆ ಈ ಪ್ರಕ್ರಿಯೆಯಾಗಿದೆ. ಬಹಳ ಸ್ಪಷ್ಟವಾಗಿ ಕೆಲವು ಶರತ್ತುಗಳ ಮೇಲೆ ಈ ಪ್ರಕ್ರಿಯೆಯಾಗಿದೆ ಎಂದರು. ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ
ಇನ್ನೂ ಆಹಾರ ಸಂಸ್ಕರಣೆ ಬೆಲೆ ಏರಿಕೆ ಮಾಡುವ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ನಮ್ಮ ದೇಶದಲ್ಲಿ ಅಕ್ಕಿ ಗೋಧಿ ಸೇರಿದಂತೆ ದವಸ ಧಾನ್ಯಗಳು ಒಂದೂವರೆ ವರ್ಷಕ್ಕೆ ಆಗುವಷ್ಟು ಇದೆ. ಸಂಗ್ರಹಣೆ ಹಾಗೂ ಸಾಗಾಟ ಮಾಡುವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಮ್ಮ ಇಲಾಖೆಯಿಂದ ಅಧಿಸೂಚನೆ ಸಹ ನೀಡಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಬಳಿ ಆಹಾರ ಸಂಗ್ರಹಣೆ ಇದೆ ಎಂದು ಹೇಳಿದರು.