ಬೀದರ್: ಸಮಾಜಘಾತುಕ ಶಕ್ತಿಗಳನ್ನು ಬಳಸಿಕೊಂಡು ನನ್ನ ಕಾರು ಅಡ್ಡಗಟ್ಟಿ ಏನಾದರೂ ಅಪಾಯ ಮಾಡಬೇಕೆಂದು ಸಂಚು ಹೂಡಿದ್ದರು ಎಂದು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ.
Advertisement
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾರ್ಯಕರ್ತರ ಭೇಟಿಗೆ ಹೋದ ಎಲ್ಲಾ ಕಡೆಗಳಲ್ಲಿ ಪ್ರಕಾಶ್ ಖಂಡ್ರೆ ನನ್ನ ಹಿಂಬಾಲಿಸಿದ್ದಾರೆ. ಸೋಲು ಖಾತರಿಯಾದ ಮೇಲೆ ಹೇಗಾದರೂ ಗಲಾಟೆ ಮಾಡಬೇಕು ಎಂದು ಬಹಳ ಪ್ರಯತ್ನ ಮಾಡಿದ್ದಾರೆ. ಬಬ್ಬ ಶಾಸಕ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷನಿಗೆ ಇವತ್ತು ರಕ್ಷಣೆ ಇಲ್ಲ ಎಂದಾದರೆ, ಸರ್ಕಾರ ಜನಸಾಮಾನ್ಯರಿಗೆ ಯಾವ ರೀತಿಯ ರಕ್ಷಣೆ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಇಲ್ಲ ಗೂಂಡಾಗಳ ರಾಜ್ಯದಲ್ಲಿದ್ದೀವಾ? ಈಶ್ವರ ಖಂಡ್ರೆ
Advertisement
ಕಾನೂನು ಉಲ್ಲಂಘನೆ, ಶಾಂತಿ ಕದಡುವ ಹಾಗೂ ಹಲ್ಲೆ ನಡೆಸುವ ಷಡ್ಯಂತ್ರ ಹೂಡಿರುವವರ ವಿರುದ್ಧ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Advertisement
Advertisement
ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ನಾನೇ ಇಂದು ಒಂದು ಹೆಜ್ಜೆ ಹಿಂದೆ ಹಾಕಿದ್ದೇನೆ. ಒಂದು ವೇಳೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು? ನಾನೇ ದೇವೇಗೌಡ್ರ ಮನೆ ಬಾಗಿಲು ಕ್ಲೋಸ್ ಮಾಡಿ ಬಂದಿದ್ದೇನೆ: ಜಿಟಿಡಿ