ಮೈಸೂರು: ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು..? ನಾನೇ ದೇವೇಗೌಡರ ಮನೆ ಬಾಗಿಲನ್ನು ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ ಎಂದು ಕುಮಾರಸ್ವಾಮಿಗೆ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.
Advertisement
ಮೈಸೂರಿನಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಬಾಗಿಲು ಹಾಕಿಕೊಂಡು ಬಂದ ನಂತರ ಅಂದಿನಿಂದ ಬಾಗಿಲು ಹಾಕಿದ್ದರೋ, ತೆಗೆದಿದ್ದಾರೋ ಎಂದು ನಾನು ನೋಡಿಲ್ಲ. ನಾನಂತು ನೋಡೋಕೆ ಹೋಗಲ್ಲ. ಈ ವಿಧಾನಪರಿಷತ್ ಚುನಾವಣೆ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಗುವುದಿಲ್ಲ. ಆದರೆ ಇಲ್ಲಿ ಕಳಂಕಗಳು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಜೆಡಿಎಸ್‍ನಲ್ಲಿ ಇರಬೇಕಾ? ಬೇಡ್ವಾ?: ಜಿ.ಟಿ.ದೇವೆಗೌಡ
Advertisement
Advertisement
ಪರಿಷತ್‍ಗೆ ತಜ್ಞರು, ಬುದ್ದಿಜೀವಿಗಳು ಆರಿಸಿ ಹೋಗಬೇಕು. ಆದರೆ ಹಿನ್ನೆಲೆ ಹೇಗೆ ಇದ್ದರೂ ದುಡ್ಡೊಂದಿದ್ರೆ ಸಾಕು ಎನ್ನುವಂತಾಗಿದೆ. ಮೈಸೂರಿನಲ್ಲಿ ಮಂಜುನಾಥ ಸ್ವಾಮಿಯ ಬೆಳ್ಳಿಯ ಕಾಯಿನ್, ಜೊತೆಗೆ ಉಪ್ಪು, ಮಾರಿ ಕೂದಲು ಇಟ್ಟು ಆಣೆ ಪ್ರಮಾಣ ಮಾಡಿ ವೋಟ್ ಹಾಕಿಸಿಕೊಂಡಿದ್ದಾರೆ. ಇದನ್ನು ನೋಡಿದ್ರೆ ಪರಿಷತ್‍ನ ಪಾವಿತ್ರತೆಗೆ ಕಳಂಕ ಅಲ್ಲವೇ? ಎಂದು ಕಿಡಿಕಾರಿದರು. ಇದನ್ನೂ ಓದಿ: ಕರ್ನಾಟಕ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೊಸ ಗೈಡ್‌ಲೈನ್ಸ್
Advertisement