ಬೆಂಗಳೂರು: ಲಾಕ್‍ಡೌನ್ ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಎಸ್ಕಾಂಗೆ ಸರ್ಕಾರ ಆದೇಶ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗೆ ಸರ್ಕಾರ ನಿರ್ದೇಶನ ನೀಡಿದ್ದು, ಸಾರ್ವಜನಿಕರ ಸಮರ್ಪಕ ಮಾಹಿತಿ ನೀಡಿ ಬಿಲ್ ಸಂಗ್ರಹಿಸುವಂತೆ ಆದೇಶಿಸಿದೆ. ಆನ್‍ಲೈನ್, ವಾಟ್ಸಪ್, ಈ ಮೇಲ್ ಗಳ ಮೂಲಕ ವಿದ್ಯುತ್ ಬಳಕೆಯ ಬಗ್ಗೆ ಬಿಲ್ ಗಳನ್ನು ಸಾರ್ವಜನಿಕರಿಗೆ ನೀಡಲು ಸೂಚನೆ ನೀಡಲಾಗಿದೆ. ಗ್ರಾಹಕರು ಎಸ್ಕಾಂ ಮೊಬೈಲ್ ಆ್ಯಪ್ ಮೂಲಕ ಬಿಲ್ ಪಡೆಯಬಹುದು ಅಥವಾ 1912 ಹೆಲ್ಪ್ ಲೈನ್ ನಂಬರ್‍ಗೆ ಕರೆ ಮಾಡಿ ನಿಮ್ಮ ವಿದ್ಯುತ್ ಬಿಲ್ ಮಾಹಿತಿ ಪಡೆಯಬಹುದಾಗಿದೆ.
ಎಸ್ಕಾಂಗೆ ಸಾರ್ವಜನಿಕರು ನೀಡಿದ ಫೋನ್, ವಾಟ್ಸಪ್, ಈ ಮೇಲ್‍ಗಳಿಗೆ, ಮೆಸ್ಸೆಜ್ ಗಳ ಮೂಲಕ ವಿದ್ಯುತ್ ಬಿಲ್, ಎಪ್ರಿಲ್ ತಿಂಗಳ ವಿದ್ಯುತ್ ಬಳಕೆ ವಿವರ ಕಳಿಸಲು ಸರ್ಕಾರ ಸೂಚಿಸಿದೆ. ಗ್ರಾಹಕರು ಆನ್‍ಲೈನ್ ಮೂಲಕ, ವಿದ್ಯುತ್ ನಿಗಮದ ಕಚೇರಿ ಕ್ಯಾಶ್ ಕೌಂಟರ್, ಕರ್ನಾಟಕ ಒನ್ ವೆಬ್ ಸೈಟ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಸ್ಪಾಟ್ ಬಿಲ್ಲಿಂಗ್ ಮಷೀನ್ ಮೂಲಕ ಬಿಲ್ ಪಾವತಿಸಬಹುದು.