ಚಹಾದೊಂದಿಗೆ ಹೊಸ ಹೊಸ ಸ್ನ್ಯಾಕ್ಸ್‌ಗಳನ್ನೇ (Snacks) ಸವಿಯಲು ನಾಲಿಗೆ ಯಾವಾಗಲೂ ಬಯಸುತ್ತದೆ. ಮಕ್ಕಳು ಕೂಡಾ ತುಂಬಾ ಇಷ್ಟ ಪಟ್ಟು ತಿನ್ನುವ ಈರುಳ್ಳಿ ರಿಂಗ್ಸ್ (Onion Rings) ಒಮ್ಮೆ ನೀವೂ ಮಾಡಿ ನೋಡಿ. ಚಹಾದೊಂದಿಗೆ ಮಾತ್ರವಲ್ಲದೇ ಇದನ್ನು ಊಟದೊಂದಿಗೂ ಸೈಡ್ ಡಿಶ್ ಆಗಿ ಬಡಿಸಬಹುದು. ಕ್ರಿಸ್ಪಿ ಈರುಳ್ಳಿ ರಿಂಗ್ಸ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಈರುಳ್ಳಿ – 1
ಮೈದಾ – ಅರ್ಧ ಕಪ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಮಿಕ್ಸ್ಡ್ ಹರ್ಬ್ಸ್ – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ನೀರು – ಅರ್ಧ ಕಪ್
ಪುಡಿಮಾಡಿದ ಕಾರ್ನ್ ಫ್ಲೇಕ್ಸ್ – 1 ಕಪ್
ಎಣ್ಣೆ – ಹುರಿಯಲು ಇದನ್ನೂ ಓದಿ: ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಈರುಳ್ಳಿಯನ್ನು ಅಡ್ಡಕ್ಕೆ ಸ್ವಲ್ಪ ದಪ್ಪವಾಗಿ ಕತ್ತರಿಸಿ, ಬಳೆಗಳಂತೆ ಅದರ ಪದರಗಳನ್ನು ಪ್ರತ್ಯೇಕಿಸಿ.
* ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಮಿಕ್ಸ್ಡ್ ಹರ್ಬ್ಸ್, ಚಿಲ್ಲಿ ಫ್ಲೇಕ್ಸ್ ಮತ್ತು ಉಪ್ಪು ಸೇರಿಸಿ. ಅಗತ್ಯವಿದ್ದಂತೆ ನೀರನ್ನು ಸೇರಿಸಿ ಮೃದುವಾದ ಬ್ಯಾಟರ್ ತಯಾರಿಸಿ.
* ಇನ್ನೊಂದು ಬಟ್ಟಲಿನಲ್ಲಿ ಪುಡಿಮಾಡಿದ ಕಾರ್ನ್ ಫ್ಲೇಕ್ಸ್ ಅನ್ನು ಇರಿಸಿ.
* ಈಗ ಮೈದಾ ಬ್ಯಾಟರ್‌ಗೆ ಈರುಳ್ಳಿ ಬಳೆಗಳನ್ನು ಅದ್ದಿ, ಸಂಪೂರ್ಣವಾಗಿ ಕೋಟ್ ಆದ ಬಳಿಕ ಪುಡಿ ಮಾಡಿದ ಕಾರ್ನ್ ಫ್ಲೇಕ್ಸ್ ಮೇಲೆ ರೋಲ್ ಮಾಡಿ.
Advertisement
* ಡಬಲ್ ಕೋಟ್ ಬೇಕೆಂದರೆ ಮತ್ತೊಮ್ಮೆ ಅದನ್ನು ಮೈದಾ ಬ್ಯಾಟರ್‌ನಲ್ಲಿ ಅದ್ದಿ, ಕಾರ್ನ್ ಫ್ಲೇಕ್ಸ್ನಿಂದ ಕೋಟ್ ಮಾಡಿಕೊಳ್ಳಿ.
* ಈಗ ಬಿಸಿ ಎಣ್ಣೆಯಲ್ಲಿ ಈರುಳ್ಳಿ ಬಳೆಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
* ಈರುಳ್ಳಿ ರಿಂಗ್ಸ್ ಎರಡೂ ಬದಿಯಲ್ಲಿ ತಿರುಗಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಹುರಿಯಿರಿ.
* ಈಗ ಈರುಳ್ಳಿ ರಿಂಗ್ಸ್ ಅನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್‌ನಲ್ಲಿ ಇರಿಸಿ.
* ಇದೀಗ ಈರುಳ್ಳಿ ರಿಂಗ್ಸ್ ತಯಾರಾಗಿದ್ದು, ಟೀ ಟೈಮ್‌ನಲ್ಲಿ ಸಾಸ್ ಜೊತೆ ಆನಂದಿಸಿ. ಇದನ್ನೂ ಓದಿ: ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ