ಚಹಾ ಸವಿಯುವ ವೇಳೆ ಹೆಚ್ಚಿನವರು ಏನಾದರೂ ರುಚಿರುಚಿಯಾದ ತಿನಿಸು ತಿನ್ನಬೇಕೆಂದು ಹಂಬಲಿಸುತ್ತಾರೆ. ಅಂತಹವರಿಗಾಗಿ ನಾವಿಂದು ಒಂದು ನಾನ್ವೆಜ್ ರೆಸಿಪಿ ಹೇಳಿಕೊಡುತ್ತೇವೆ. ರುಚಿಕರವಾದ ಚಿಕನ್ ಬಾಲ್ಸ್ (Chicken Balls) ಒಮ್ಮೆ ನೀವು ಕೂಡಾ ಟ್ರೈ ಮಾಡಿ, ಚಹಾದ ಸಮಯದಲ್ಲಿ ಸವಿಯಿರಿ.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಚಿಕನ್ – ಅರ್ಧ ಕೆಜಿ (ಮೂಳೆ ರಹಿತ)
ಬೇಯಿಸಿದ ಆಲೂಗಡ್ಡೆ – 1
ಮೊಟ್ಟೆ – 1
ಮೈದಾ ಹಿಟ್ಟು – 2 ಟೀಸ್ಪೂನ್
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಬ್ರೆಡ್ ಕ್ರಂಬ್ಸ್ – 1 ಕಪ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಕರಿ ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಕೇರಳ ಶೈಲಿಯ ಈ ರುಚಿಕರ ಮೀನು ಸಾರು ಮಾಡಿ
ಮಾಡುವ ವಿಧಾನ:
* ಮೊದಲಿಗೆ ಬೇಯಿಸಿದ ಚಿಕನ್ ಅನ್ನು ಸಣ್ಣದಾಗಿ ಕೊಚ್ಚಿ, ಒಂದು ಪಾತ್ರೆಗೆ ಹಾಕಿ.
* ಅದಕ್ಕೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಗರಂ ಮಸಾಲಾ, ಕರಿ ಮೆಣಸಿನ ಪುಡಿ, ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಹಾಗೂ ಬೇಯಿಸಿದ ಆಲೂಗಡ್ಡೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಒಂದು ಬೌಲ್ನಲ್ಲಿ ಬ್ರೆಡ್ ಕ್ರಂಬ್ಸ್, ಕಾರ್ನ್ ಫ್ಲೋರ್, ಮೈದಾ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಇಡಿ.
* ಇನ್ನೊಂದು ಬೌಲ್ನಲ್ಲಿ ಮೊಟ್ಟೆಯನ್ನು ಒಡೆದು ಬೀಟ್ ಮಾಡಿ ಇಟ್ಟುಕೊಳ್ಳಿ.
* ಈಗ ಚಿಕನ್ ಮಿಶ್ರಣವನ್ನು ತೆಗೆದುಕೊಂಡು, ಸಣ್ಣ ಸಣ್ಣ ಉಂಡೆಗಳನ್ನಾಗಿ ಸುತ್ತಿಕೊಳ್ಳಿ.
* ಉಂಡೆಗಳನ್ನು ಒಂದೊಂದಾಗಿಯೇ ಬೀಟ್ ಮಾಡಿದ ಮೊಟ್ಟೆಯಲ್ಲಿ ಅದ್ದಿ. ಬಳಿಕ ಬ್ರೆಡ್ ಕ್ರಂಬ್ಸ್ ಮಿಶ್ರಣದಲ್ಲಿ ರೋಲ್ ಮಾಡಿ.
* ಈಗ ಬಿಸಿ ಎಣ್ಣೆಯಲ್ಲಿ ಚಿಕನ್ ಉಂಡೆಗಳನ್ನು ಒಂದೊಂದಾಗಿಯೇ ಬಿಟ್ಟು, ಡೀಪ್ ಫ್ರೈ ಮಾಡಿ.
* ಉಂಡೆಗಳು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
* ಇದೀಗ ರುಚಿಕರ ಚಿಕನ್ ಬಾಲ್ಸ್ ತಯಾರಾಗಿದ್ದು, ಚಹಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ರೆಸಿಪಿ ಎಗ್ ಪಾಸ್ತಾ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k