ಲಂಡನ್: ಅಕ್ಟೋಬರ್ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಮುಂದಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕ್ ಪ್ರವಾಸವನ್ನು ದಿಢೀರ್ ಆಗಿ ರದ್ದುಗೊಳಿಸಿದೆ.
16 ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕ್ ಪ್ರವಾಸ ಕೈಗೊಳ್ಳಲು ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು. ಅಕ್ಟೋಬರ್ ನಲ್ಲಿ ಪಾಕ್ ವಿರುದ್ಧ ಪುರುಷರ ತಂಡ ಎರಡು ಟಿ20 ಪಂದ್ಯ, ಮತ್ತು ಮಹಿಳೆಯರ ತಂಡ 3 ಏಕದಿನ ಪಂದ್ಯವಾಡುವ ಬಗ್ಗೆ ಎರಡು ದೇಶದ ಕ್ರಿಕೆಟ್ ಬೋರ್ಡ್‍ಗಳು ನಿರ್ಧರಿಸಿದ್ದವು. ಆದರೆ ಇದೀಗ ಭದ್ರತಾ ಎಚ್ಚರಿಕೆ ಹಿನ್ನೆಲೆ ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದೆ. ಇದನ್ನೂ ಓದಿ: ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ!
Advertisement
"We can confirm that the Board has reluctantly decided to withdraw both teams from the October trip."
???????? #PAKvENG ????????????????????????????
— England Cricket (@englandcricket) September 20, 2021
Advertisement
ಕೆಲದಿನಗಳ ಹಿಂದೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯನ್ನು ಭದ್ರತಾ ಎಚ್ಚರಿಕೆ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ರದ್ದುಗೊಳಿಸಿತ್ತು. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‍ನ ಆದೇಶದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಆಟಗಾರರು ತಮ್ಮ ಹೋಟೆಲ್‍ನಿಂದ ಹೊರಬರದೆ ನೇರವಾಗಿ ವಿಮಾನವೇರಿ ತಮ್ಮ ದೇಶಕ್ಕೆ ಹಿಂದಿರುಗಿದ್ದರು. ಇದನ್ನೂ ಓದಿ:ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ
Advertisement
Advertisement