Bengaluru City

ಯಾವ ಅದ್ಧೂರಿ ಮದುವೆಗೂ ಕಡಿಮೆ ಇಲ್ಲ ಅಮ್ಮು-ಜಗ್ಗು ನಿಶ್ಚಿತಾರ್ಥ

Published

on

Share this

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಗೋಲ್ಡನ್ ಗರ್ಲ್ ಖ್ಯಾತಿಯ ನಟಿ ಅಮೂಲ್ಯ- ಜಗದೀಶ್ ವಿವಾಹ ನಿಶ್ಚಿತಾರ್ಥ ಸಮಾರಂಭ ಸೋಮವಾರ ಕೆಂಗೇರಿಯ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ಅದ್ಧೂರಿಯಾಗಿ ನಡೆಯಿತು.

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಯ ಮೂಲಕ ಪರಿಚಯವಾದ ಎರಡೂ ಕುಟುಂಬ ಗುರು ಹಿರಿಯ ನಿಶ್ಚಯದ ಮೇರೆಗೆ ಮದುವೆ ನಿಶ್ಚಯಿಸಿದೆ. ಮೇ ತಿಂಗಳು 10, 11 ಅಥವಾ 20, 21 ಕ್ಕೆ ಮದುವೆ ನಡೆಸಲು ತೀರ್ಮಾನಿಸಲಾಗಿದೆ.

ನಿಶ್ಚಿತಾರ್ಥ ಸಮಾರಂಭದಲ್ಲಿ ಜರತಾರಿ ಸೀರೆಯುಟ್ಟು ಅಮೂಲ್ಯ ಮಿಂಚಿದರೆ, ಇಂಡೋ ವೆಸ್ಟರ್ನ್ ಶೈಲಿಯ ಕುರ್ತಾದಲ್ಲಿ ಜಗದೀಶ್ ಕಂಗೊಳಿಸಿದ್ರು. ಗಣೇಶ್ ಶಿಲ್ಪಾ ದಂಪತಿ ಮನೆಯ ಸದಸ್ಯರಂತೆ ಓಡಾಡಿಕೊಂಡಿದ್ದರು. ಅತ್ತ ಹಲವಾರು ಕಲಾವಿದರು ಆಗಮಿಸಿ ಭಾವೀ ದಂಪತಿಗೆ ಶುಭ ಹಾರೈಸಿದರು.

ಕಾರ್ಯಕ್ರಮ ಹೀಗೆ ನಡೆಯಿತು:
ಮೊದಲು ಅಮೂಲ್ಯ ಕುಟುಂಬ ಸಾಯಿಗೊಲ್ಡ್ ಪ್ಯಾಲೇಸ್‍ಗೆ ಬಂದರು. ಅಮೇಲೆ ಗಂಡಿನ ಕಡೆಯವರು ಕಲ್ಯಾಣ ಮಂಟಪಕ್ಕೆ ಬಂದರು. ಗಂಡಿನ ಕಡೆಯವರಿಗೆ ಸಾಂಪ್ರದಾಯಕವಾಗಿ ರಂಗೋಲಿ ಮತ್ತು ಕೋಲ್ಡ್ ಫಾಗ್ ಮೂಲಕ ಅಮೂಲ್ಯ ಮನೆಯವರು ಸ್ವಾಗತಿಸಿದರು.

ಅಮೂಲ್ಯ ಮನೆಯವರು ಗಂಡಿನ ಕಡೆಯವರಿಗೆ ಸ್ವಾಗತಿಸಿದ ನಂತರ ನವ ಜೋಡಿಗಳು ದೀಪ ಬೆಳಗಿಸುವುದರ ಮೂಲಕ ಈ ಶುಭಾ ಕಾರ್ಯಕ್ಕೆ ಚಾಲನೆನೀಡಿದರು. ಎರಡು ಕುಟುಂಬದವರು ವಿಘ್ನ ವಿನಾಯಕನನ್ನು ನೆನೆದು ಗಣಹೋಮ ನೇರವೇರಿಸಿದರು.

ಕಲ್ಯಾಣ ಮಂಟಪ ಮಿನಿ ಅರಮನೆಯಂತೆ ಸಿಂಗಾರಗೊಂಡಿತ್ತು. ಒಕ್ಕಲಿಗರ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿತ್ತು. ಇಂಡೋ ವೆಸ್ಟರ್ನ್ ಸ್ಟೈನ್‍ನಲ್ಲಿ ಜಗದೀಶ್ ಝಗಮಗಿಸುತ್ತಿದ್ದರೆ, ಅಮ್ಮು ಜರತಾರಿ ಸೀರೆಯುಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದರು.

ಭೂರಿ ಭೋಜನ ವ್ಯವಸ್ಥೆ:
ಅಮೂಲ್ಯ-ಜಗದೀಶ್ ಎಂಗೇಜ್‍ಮೆಂಟ್‍ಗಾಗಿ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಾದಮ್ ಪೂರಿ, ಹೆಸರು ಬೇಳೆ ಪಾಯಸ, ಪೂರಿ, ಅವರೇ ಬೇಳೆ ಗೊಜ್ಜು, ಮಾವಿನ ಕಾಯಿ ಚಿತ್ರನ್ನಾ, ಕಾಯಿ ಚಟ್ನಿ, ಕೊಸಂಬರಿ, ಮಿಕ್ಸ್ ಪಲ್ಲಾವ್, ಅನ್ನ, ನೂಗ್ಗೆಕಾಯಿ ಸಂಬಾರು, ಮದ್ರಾಸ್ ರಸಂ, ಆಲು ಬೋಂಡಾ.. ತರಹೇ ವಾರಿ ಅಡುಗೆಗಳನ್ನ ತಯಾರು ಮಾಡಲಾಗಿತ್ತು.

ಮಧ್ಯಾಹ್ನದಿಂದಲೇ ನಿಶ್ಚಿತಾರ್ಥ ಕಾರ್ಯಕ್ರಮ ಶುರುವಾದ ಕಾರಣ ಮಧ್ಯಾಹ್ನನವೇ ಸುಮಾರು 300 ಮಂದಿ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಎಂಗೇಜ್‍ಮೆಂಟ್‍ಗೆ ಬರುವ ಸುಮಾರು 3000 ಅತಿಥಿಗಳಿಗಾಗಿ ತರಹೆವಾರಿ ಅಡುಗೆ ಸಿದ್ದಪಡಿಸಲಾಗಿದೆ.

ಮದುವೆಯಾದ ನಂತರ ಅಮೂಲ್ಯ ಚಿತ್ರದಲ್ಲಿ ಆಕ್ಟ್ ಮಾಡ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಎಂಗೇಜ್‍ಮೆಂಟ್ ಆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅಮೂಲ್ಯ,”ಹತ್ತು ವರ್ಷ ಸಿನಿಮಾರಂಗದಲ್ಲಿದ್ದೀನಿ. ಅದ್ರಿಂದಲೇ ನಾನು ಅನ್ನ ತಿಂದಿದ್ದೀನಿ. ಒಳ್ಳೆಯ ಸಬ್ಜೆಕ್ಟ್ ಸಿಕ್ಕಿದ್ರೆ ಖಂಡಿತ ಸಿನಿಮಾ ಮಾಡ್ತೀನಿ” ಅಂತ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

ಅದ್ಧೂರಿ ಮದುವೆ:
ಜಗದೀಶ್ ಕೈಗೆ ಅಮೂಲ್ಯ ಸಾಲಿಟೇರ್ ರಿಂಗ್ ತೊಡಿಸಿದರೆ, ಅಮೂಲ್ಯಗೆ ಜಗದೀಶ್ ಡೈಮಂಡ್ ರಿಂಗ್ ತೊಡಿಸಿದ್ದಾರೆ. ಈ ವಿವಾಹ ನಿಶ್ವಿತಾರ್ಥ ಸಮಾರಂಭದಲ್ಲಿ ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ಎರಡೂ ಕುಟುಂಬಗಳು ಮದುವೆಯನ್ನು ಇನ್ನೂ ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications