ಬೆಂಗಳೂರು: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಎಮಿರೇಟ್ಸ್ ವಿಮಾನಕ್ಕೆ ಲ್ಯಾಂಡಿಂಗ್‌ಗೆ ಅನುಮತಿ ಸಿಗದೇ ವಾಪಸ್ ಆಗಿದೆ.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 4:30ಕ್ಕೆ ವಿಮಾನ ಟೇಕಾಫ್ ಆಗಿತ್ತು. ದುಬೈಗೆ ತೆರಳಿದಾಗ ಲ್ಯಾಂಡಿಂಗ್‌ಗೆ ಅನುಮತಿ ಸಿಗದ ಹಿನ್ನೆಲೆ ಬೆಂಗಳೂರಿಗೆ ವಿಮಾನ ವಾಪಸ್ ಆಗಿದೆ. ಇದರಿಂದ ಜಿದ್ದಾಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದ್ದಾರೆ. ಇದನ್ನೂ ಓದಿ: ದುಬೈ ಏರ್‌ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿ – ವಿಮಾನಗಳ ಹಾರಾಟ ಸ್ಥಗಿತ
ವಾಪಸ್ ಬಂದ ಪ್ರಯಾಣಿಕರಿಗೆ ತಿಂಡಿ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಏರ್‌ಲೈನ್ಸ್‌ನಿಂದ ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಇರಾನ್ ಯುದ್ಧದ ಬಗ್ಗೆ ಸುಳ್ಳು ಸುದ್ದಿ, ವೀಡಿಯೋ ಪೋಸ್ಟ್ – 19 ಭಾರತೀಯರ ಬಂಧನಕ್ಕೆ UAE ಆದೇಶ

