BBK 11: ರೀ ಎಂಟ್ರಿ ಕೊಟ್ಟ ಸ್ಪರ್ಧಿಗಳ ಆರೋಪಕ್ಕೆ ಕೈಮುಗಿದ ಉಗ್ರಂ ಮಂಜು

Public TV
2 Min Read
bigg boss 1 9

‘ಬಿಗ್ ಬಾಸ್ ಸೀಸನ್ ಕನ್ನಡ 11’ರಲ್ಲಿ (Bigg Boss Kannada 11) ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ತಾವು ಹೇಗೆ ಮನೆಯಿಂದ ಹೊರ ಹೋಗಲಾಯಿತು ಎಂಬುದನ್ನು ಸ್ಪರ್ಧಿಗಳು ವಿವರಿಸಿದ್ದಾರೆ. ಇದರಿಂದ ಪ್ರಸ್ತುತ ಮನೆಯಲ್ಲಿರುವ ಕೆಲವರಿಗೆ ನೋವಾಗಿದೆ. ರೀ ಎಂಟ್ರಿ ಕೊಟ್ಟ ಸ್ಪರ್ಧಿಗಳ ಮಾತು ಕೇಳಿ ಉಗ್ರಂ ಮಂಜು ಕೈಮುಗಿದಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಅರೆಸ್ಟ್

bigg boss 1 10

ಬಿಗ್ ಬಾಸ್‌ನಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತೆ ಮನೆಗೆ ಗೆಸ್ಟ್‌ಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅವರು ವಾಪಸ್ ಆಗಿದ್ದಾರೆ. ಮನೆಗೆ ಬಂದ ಗೋಲ್ಡ್ ಸುರೇಶ್‌ಗೆ ಕುಚುಕು ಗೆಳೆಯರು ಹನುಮಂತ, ಧನರಾಜ್‌ ಮುತ್ತು ಕೊಟ್ಟು ಸ್ವಾಗತಿಸಿದ್ದಾರೆ.  ತ್ರಿವಿಕ್ರಮ್ ಅಂತೂ ಮಾನಸ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.

ugramm manju

ಬಿಗ್ ಬಾಸ್‌ನಲ್ಲಿ ಸಿಹಿ ಕಹಿ ಅನುಭವಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಿಷ್ಟಿವೆ. ಕೆಟ್ಟ ಘಟನೆಗಳು ಸಾಕಷ್ಟು ಇವೆ. ಮನೆಯಿಂದ ಹೊರ ಹೋಗಲು ಯಾರು ಕಾರಣ ಎಂದು ಎಲಿಮಿನೇಟ್ ಆದ ಸ್ಪರ್ಧಿಗಳು ಹೇಳಿದ್ದಾರೆ. ಕೇವಲ ಉಪ್ಪಿಕಾಯಿ ಎತ್ತಿಕೊಂಡೆ ಎನ್ನುವ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡಿದರು ಗೌತಮಿ ಎಂದು ಗೋಲ್ಡ್ ಸುರೇಶ್ ನೇರವಾಗಿ ಹೇಳಿದ್ದಾರೆ. ಇನ್ನು ಹಂಸ ಕೂಡ ಮಾತನಾಡಿ, ಮಂಜು ಅವರು ತುಂಬಾ ಸಲ ನನ್ನನ್ನು ಹರ್ಟ್ ಮಾಡಿದ್ದಾರೆ ಎಂದಿದ್ದಾರೆ. ಯಾಕೆ ನನ್ನ ಜೊತೆನೇ ಮಂಜು ಜಗಳ ಮಾಡ್ತಾರೆ ಅನಿಸುತ್ತಿತ್ತು ಎಂದು ಮಾನಸ ಹೇಳಿದ್ದಾರೆ.

ರಾಜರ ಟಾಸ್ಕ್‌ನಲ್ಲಿ ಎಳೆದು ನನ್ನನ್ನು ಪಕ್ಕಕ್ಕೆ ಹಾಕಿದ್ದು ಈಗಲೂ ನನಗೆ ನೋವು ಇದೆ ಎಂದು ಮಂಜು ವಿರುದ್ಧ ಶಿಶಿರ್‌ ಮಾತನಾಡಿದ್ದಾರೆ. ಮನೆಗೆ ಬಂದವರು ಮಂಜು ಮೇಲೆಯೇ ಹೆಚ್ಚಿನ ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಮಂಜು ಅವರು 4ರಿಂದ 5 ವಾರ ಮಂಜು ಹೇಗಿದ್ದ, ಈಗ ಯಾಕೋ ಆ ರೀತಿ ಕಾಣಿಸುತ್ತಿಲ್ಲ ಎನ್ನುವುದಕ್ಕೆ ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ ಎಂದು ರೀ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಕೈಮುಗಿದಿದ್ದಾರೆ.

Share This Article