ಚೆನ್ನೈ: ಆನೆಗಳ ಹಿಂಡು ರಸ್ತೆ ದಾಟುತ್ತಿರುವಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕರನ್ನು ನೋಡಿ ಬೆನ್ನೆಟ್ಟಿದ ಘಟನೆ ತಮಿಳುನಾಡಿನ ಕೂನೂರಿನಲ್ಲಿ ನಡೆದಿದೆ.
ತಮಿಳುನಾಡಿನ ಕಟ್ಟೇರಿ ಬಳಿ ಆನೆಗಳ ಹಿಂಡುಗಳು ಆಹಾರ ಮತ್ತು ನೀರಿನ್ನು ಹುಡುಕುತ್ತಾ ಹೆದ್ದಾರಿಗೆ ಬಂದಿದ್ದವು. ಇದರಿಂದಾಗಿ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವಾಹನಗಳು ಆನೆ ರಸ್ತೆಯನ್ನು ದಾಟುವವರೆಗೆ ಅಲ್ಲೇ ನಿಂತಿದ್ದವು. ಆದರೆ ಅಲ್ಲಿದ್ದ ಯುವಕರು ಆ ಆನೆಗಳು ರಸ್ತೆಯನ್ನು ದಾಟುವಾಗ ಸೆಲ್ಫಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದ ಆನೆಗಳು ಕೆರಳಿದೆ. ಅಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಓಡಿಸಲು ಮುಂದಾಗಿದೆ.
Advertisement
हाथियों के साथ सेल्फी लेने की कोशिश कर रहे थे युवक देखिए फिर क्या हुआ.. #elephants #coonoor #tamilnadu pic.twitter.com/BWbDCvVI9D
— Vijayrampatrika (@vijayrampatrika) April 6, 2022
ಪಕ್ಕದಲ್ಲಿದ್ದವರು ಭಯಭೀತರಾಗಿ ದೂರ ಸರಿದಿದ್ದಾರೆ. ನಂತರ ಆನೆಗಳು ಅರಣ್ಯಕ್ಕೆ ಇಳಿದುಹೋಗಲು ಸ್ವಲ್ಪ ಸಮಯವನ್ನು ತೆಗೆದುಕೊಂಡಿದೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರ ಹಿಡಿಯುವಂತಾಗಿದೆ: ಯತಿ ನರಸಿಂಹಾನಂದ ವಿರುದ್ಧ ಖರ್ಗೆ ಖಂಡನೆ
Advertisement
Advertisement
ನೀಲಗಿರಿ ಜಿಲ್ಲೆ ಕಾಡು ಆನೆಗಳು, ಕಾಡಾನೆಗಳು ಮತ್ತು ಚಿರತೆಗಳಂತಹ ವನ್ಯಜೀವಿಗಳಿಂದ ಸಮೃದ್ಧವಾಗಿದೆ. ಅನೇಕ ಬಾರಿ ಆನೆಗಳು ಆಹಾರ ಮತ್ತು ನೀರನ್ನು ಹುಡುಕಿಕೊಂಡು ಹೆದ್ದಾರಿಗಳನ್ನು ದಾಟುತ್ತಿರುತ್ತದೆ. ಕಳೆದ 15 ದಿನಗಳಿಂದ ಕುನ್ನೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಈ ಆನೆಗಳು ರನ್ನಿಮೇಡು, ಪಿಲ್ಲಿಮಲೈ, ಚಿನ್ನ ಕರುಂಬಳಂ ಮುಂತಾದ ಪ್ರದೇಶಗಳಲ್ಲಿ ಆಹಾರ ಮತ್ತು ನೀರು ಹುಡುಕುತ್ತಿವೆ. ಇದರಿಂದಾಗಿ ಈ ಮೊದಲೇ ಅರಣ್ಯ ಇಲಾಖೆಯವರು ಪ್ರವಾಸಿಗರಿಗೆ ಜಾಗರೂಕರಾಗಿರಿ ಹಾಗೂ ಆನೆಯ ಹಿಂಡನ್ನು ಪ್ರಚೋದಿಸಂತೆ ಅಥವಾ ಹತ್ತಿರಕ್ಕೆ ಹೋಗಲು ಪ್ರಯತ್ನಿಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಇದನ್ನೂ ಓದಿ: ಹೀಗೆ ಮಾಡಿದ್ರೆ ಮುಂದಿನ ಜನಾಂಗಕ್ಕೆ ಕಾಂಗ್ರೆಸ್ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ: ಮುರುಗೇಶ್ ನಿರಾಣಿ