ಚಾಮರಾಜನಗರ: ಆಹಾರ ಅರಸಿ ನಾಡಿನತ್ತ ಬಂದಿದ್ದ ಒಂಟಿ ಸಲಗವೊಂದು ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡು ಕೆಲ ಕಾಲ ಪರದಾಡಿದ ಘಟನೆ ಜಿಲ್ಲೆಯ ಮುಳ್ಳೂರು ಗ್ರಾಮದ ಬಳಿ ಜರುಗಿದೆ.
Advertisement
ಗ್ರಾಮದ ಬಳಿ ಹರಿಯುವ ಕಾವೇರಿ ನದಿಯ ಮಧ್ಯ ಭಾಗದಲ್ಲಿ ಒಂಟಿ ಸಲಗ ಬೆಳಗಿನ ಜಾವ 4 ಗಂಟೆ ವೇಳೆಗೆ ಸಿಲುಕಿಕೊಂಡು ಗಾಬರಿಗೊಂಡಿದೆ. ಆಹಾರವನ್ನು ಅರಸಿಕೊಂಡು ನಾಡಿಗೆ ಬಂದಿದ್ದ ಈ ಆನೆ ನೀರು ಕುಡಿಯಲು ಹೋದ ವೇಳೆ ನದಿಯ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಗ್ರಾಮಸ್ಥರು ನದಿಯ ಎರಡು ಭಾಗದಲ್ಲಿ ಕಿರುಚಿ ಕುಚೇಷ್ಟೆ ಮಾಡಿದ್ದರಿಂದ ಆನೆ ಮತ್ತಷ್ಟು ಗಾಬರಿಗೊಂಡಿತ್ತು.
Advertisement
Advertisement
ಗ್ರಾಮಸ್ಥರನ್ನು ನೋಡಿ ಗಾಬರಿಗೊಂಡ ಆನೆ ರಭಸವಾಗಿ ಹರಿಯುತ್ತಿದ್ದ ನದಿಯಿಂದ ಹೊರಬರಲಾಗದೆ ಗಾಬರಿಗೊಂಡು ಕಿರುಚಾಡಿದೆ. ಸತತ 4 ಗಂಟೆಗಳ ಕಾಲ ಕಾವೇರಿ ನದಿ ಭಾಗದಲ್ಲಿ ಸಿಲುಕಿದ್ದ ಒಂಟಿ ಸಲಗ, ನದಿಯ ಒಂದು ಮೂಲೆಯ ಮೂಲಕ ಹೊರ ಬಂದು ಕಾಡಿನೊಳಗೆ ಹೊರಟು ಹೋಗಿದೆ.
Advertisement
https://youtu.be/3aFkUnG6_Dc