ಕೊಯಂಬತ್ತೂರು: ಕಾಡಾನೆಯೊಂದು ಮನೆಯೊಳಗ್ಗೆ ನುಗ್ಗಿ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ತಿಂದು ಹೋಗಿರುವ ದೃಶ್ಯವೊಂದು ತಮಿಳು ನಾಡಿನ ಕೊಯಂಬತ್ತೂರಿನ ತಡಗಂನಲ್ಲಿ ನಡೆದಿದೆ.
ತಡಗಂನ ಮನೆಯೊಂದರಲ್ಲಿ ನುಗ್ಗಿ ಕಾಡಾನೆ ಅಕ್ಕಿ ಹಾಗೂ ಬ್ಯಾಗ್‍ನಲ್ಲಿದ್ದ ಧ್ಯಾನಗಳನ್ನು ಹುಡುಕುತ್ತಿರುವ ವಿಡಿಯೋ ವೈರಲ್ ಆಗಿದೆ. ಆನೆ ಮನೆಗೆ ನುಗ್ಗಿದ ಸಮಯದಲ್ಲಿ ಮನೆಯವರು ನಿದ್ರೆಯಲ್ಲಿದ್ದರು. ನಂತರ ಆನೆ ಹುಡುಕುತ್ತಿದ್ದಾಗ ಶಬ್ಧ ಕೇಳಿಸಿದ್ದರಿಂದ ಮನೆಯವರು ಎಚ್ಚರಗೊಂಡಿದ್ದಾರೆ.
Advertisement
Advertisement
ಮನೆಯವರು ಎಚ್ಚರಗೊಂಡು ಏನು ಶಬ್ಧ ಎಂದು ನೋಡಲು ಹೋದಾಗ ಅಲ್ಲಿ ಕಾಡಾನೆ ಇರುವುದನ್ನು ನೋಡಿ ಗಾಬರಿಯಾಗಿದ್ದಾರೆ. ನಂತರ ಅಲ್ಲಿದ್ದ ಗ್ರಾಮಸ್ಥರು ಆ ಆನೆಯನ್ನು ಓಡಿಸಿದ್ದಾರೆ. ಸದ್ಯ ಕಾಡಾನೆ ಅಕ್ಕಿ ಹಾಗೂ ಧ್ಯಾನಗಳನ್ನು ತಿನ್ನುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Advertisement
Advertisement
33 ಸೆಕೆಂಡ್‍ನ ಈ ವಿಡಿಯೋದಲ್ಲಿ ಆನೆ ತನ್ನ ಸೊಂಡಿಲನ್ನು ಬಳಸಿಕೊಂಡು ಮನೆಯಲ್ಲಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಹುಡುಕಿ ಅದನ್ನು ತಿಂದಿದೆ. ನಂತರ ಮನೆಯವರನ್ನು ಕಂಡ ಆನೆ ಸ್ವಲ್ಪ ಸಮಯ ಮನೆಯಲ್ಲೇ ಇದ್ದು ಬಳಿಕ ಅಲ್ಲಿಂದ ಹೊರಟು ಹೋಗಿದೆ.
ಕೊಯಂಬತ್ತೂರಿನಲ್ಲಿ ಆನೆ ಆಹಾರ ಹುಡುಕಿ ಕೊಂಡು ಮನೆಯೊಳಗೆ ನುಗ್ಗಿದ್ದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಆನೆಗಳು ದಾಳಿ ನಡೆಸಿ ಈ ರೀತಿ ಮಾಡಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
#WATCH: An elephant entered a house in Coimbatore's Thadagam, in search of food, this morning and ate rice & fertilisers kept in bags. The elephant later left from the spot after multiple attempts by the villagers to make it go away. #TamilNadu pic.twitter.com/rcLOAz7iFB
— ANI (@ANI) October 21, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv