– ದೇವರಾಜೇಗೌಡ ಮೇಲೆ ಶಿವರಾಮೇಗೌಡ ಒತ್ತಡ ಹಾಕಿದ್ರಾ..?
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ (Prajwal Revanna Pendrive Case) ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ವಕೀಲ ದೇವರಾಜೇಗೌಡ ಮತ್ತು ಶಿವರಾಮೇಗೌಡ ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.
ಕುಮಾರಸ್ವಾಮಿ ಹೆಸರೇಳುವಂತೆ ಶಿವರಾಮೇಗೌಡ (Shivarame Gowda) ಹೇಳಿದ್ದಾರೆನ್ನಲಾದ ಆಡಿಯೋ ಸ್ಫೋಟಗೊಂಡಿದ್ದು, ಇದೀಗ ಈ ಆಡಿಯೋ ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಶಿವರಾಮೇಗೌಡ-ದೇವರಾಜೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ದೇವೇಗೌಡರ ಬಗ್ಗೆಯೂ ಶಿವರಾಮೇಗೌಡ ಲಘು ಮಾತುಗಳನ್ನಾಡಿದ್ದಾರೆ.
Advertisement
Advertisement
ದೇವರಾಜೇಗೌಡ ಆರೋಪ ಸಂಬಂಧ ಇಂದು ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿದ್ದರು. ಈ ಬೆನ್ನಲ್ಲೇ ಆಡಿಯೋ ವೈರಲ್ ಆಗಿದೆ. ಆಡಿಯೊದಲ್ಲಿ ಅಶ್ಲೀಲ ಪೆನ್ ಡ್ರೈವ್ ಹಂಚಿಕೆಗೆ ಎಲ್‍ಆರ್ ಶಿವರಾಮೇಗೌಡ ಅವರೇ ಒತ್ತಡ ಹಾಕಿರುವುದು ಬಯಲಾಗಿದೆ. ಇದಲ್ಲದೇ ಆಡಿಯೊದಲ್ಲಿ ಹೆಚ್‍ಡಿಕೆ, ದೇವೇಗೌಡ ಹಾಗೂ ಅಮಿತ್ ಶಾ ಹೆಸರು ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ
Advertisement
ಆಡಿಯೋದಲ್ಲೇನಿದೆ..?: ದೇವರಾಜೇಗೌಡರ ಜೊತೆ ಮಾತನಾಡಿರುವ ಶಿವರಾಮೇಗೌಡ, ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾನೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕೆಂಬ ಆಸೆ ಇದೆ, ಇವನು ಮುಂದಕ್ಕೆ ಬಂದುಬಟ್ಟನ್ನಲ್ಲ ಅಂತಾ, ಅದಕ್ಕೆ ಮಾಡಿದ್ದಾನೆ ಅಂತಾ ಹೇಳಿ. ದೇವೇಗೌಡ ಹಾಗೂ ದೇವೇಗೌಡ ಮಕ್ಕಳು ಏನು ಕಡಿಮೆ ಅಂದುಕೊಳ್ಳಬೇಡಿ. ಇನ್ನು ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲ್ಲಿಲ್ವಲಾ..?.ಇನ್ನೇನು ವಿಡಿಯೋ ಇದೆ. ಡಿಕೆ ಮಾತನಾಡಿದ್ರು ಬೆಳಗ್ಗೆ, ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನಿವು ತಲೆನೆ ಕೆಡಿಸಿಕೊಳ್ಳಬೇಡಿ. ಅವರನ್ನ ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದಿದ್ದಾರೆ.
Advertisement
ನೀನೇನು ಪೆನ್ಡ್ರೈವ್‍ನ ನಾಗಮಂಗದಲ್ಲೋ, ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೆ ಹೇಳಿ. ನೀವ್ ಲಾಯರ್ ಅಲ್ವೇನಲ್ವೆನ್ರಿ..ಅದು ಏನು..? ಏನು ಆಗಲ್ಲ ಎಂದು ಶಿವರಾಮೇಗೌಡ ಹೇಳಿದಾಗ, ಅಣ್ಣ ಕಾನೂನು ಪ್ರಕಾರ ಶಿಕ್ಷೆ ಅಲ್ವೇನಣ್ಣ. ಹೆಣ್ಮಕ್ಕಳ ಮಾಣ ಮರ್ಯಾದೆ ಅಣ್ಣ. ಶೀಲದ ಬಗ್ಗೆ ನಾವೂ ಯೋಚನೆ ಮಾಡಬೇಕಲ್ವ ಎಂದು ದೇವರಾಜೇಗೌಡ ಹೇಳುತ್ತಾರೆ. ಈ ವೇಳೆ ಶಿವರಾಮೇಗೌಡ, ಅದರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ತೀರಿ. ಅಮಿತ್ ಶಾ ಚನ್ನೈನಲ್ಲಿ ಹೇಳಿದ್ದಾರಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತಾ ಎಂದಿದ್ದಾರೆ.
ಈ ಹಿಂದೆಯೋ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡಿತ್ತು.