ಹಾಸನ: ಭೀಮ ಆನೆಯಿಂದ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಆಲೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ವೆಂಕಟೇಶ್ ಮೃತಪಟ್ಟ ಅರಣ್ಯ ಸಿಬ್ಬಂದಿ. ಗಾಯಗೊಂಡ ಕಾಡಾನೆ ಚಿಕಿತ್ಸೆ ವೇಳೆ ಈ ಯಡವಟ್ಟು ಆಗಿದೆ.
Advertisement
ಹಳ್ಳಿಯೂರು ಬಳಿ ಗಾಯಗೊಂಡು ಭೀಮ ಆನೆ ನಿಂತಿತ್ತು. ಅದಕ್ಕೆ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಮುಂದಾಗಿದ್ದರು. ಅರವಳಿಕೆ ಮದ್ದು ನೀಡಲು ವನ್ಯಜೀವಿ ವೈದ್ಯ ವಸೀಂ ಜೊತೆ ವೆಂಕಟೇಶ್ ತೆರಳಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ವೆಂಕಟೇಶ್ ಮೇಲೆ ಆನೆ ದಾಳಿ ನಡೆಸಿತು.
Advertisement
ಗಾಯಾಳು ವೆಂಕಟೇಶ್ ಅವರನ್ನು ಹಾಸನದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಆಸ್ಪತ್ರೆಗೆ ಸಾಗಿಸುವಾಗ ಅಂಬುಲೆನ್ಸ್ ಕೈಕೊಟ್ಟಿತು. ನಂತರ ಅರಣ್ಯ ಇಲಾಖೆ ವಾಹನದಲ್ಲಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಿಮ್ಸ್ ಆಸ್ಪತ್ರೆಯಲ್ಲಿ ವೆಂಕಟೇಶ್ ಮೃತಪಟ್ಟರು.
Advertisement
ವೆಂಕಟೇಶ್ ಅವರು ಶಾರ್ಪ್ ಶೂಟರ್ ಆಗಿದ್ದರು. ಅರಿವಳಿಕೆ ನೀಡಿ ಹತ್ತಾರು ಆನೆಗಳನ್ನು ಸೆರೆ ಹಿಡಿಯುವಲ್ಲಿ ಇವರು ಎತ್ತಿದ ಕೈ ಆಗಿದ್ದರು. 1987 ರಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. 2019 ರ ವರೆಗೂ ಖಾಯಂ ಆಗದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಮಾಡಿದ್ದರು. 2019 ರಲ್ಲಿ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯಿಂದ ಮುಕ್ತಿ ನೀಡಲಾಗಿತ್ತು. ಆದರೂ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರ ಪಾತ್ರ ಮುಖ್ಯವಾಗಿತ್ತು. ಹಾಗಾಗಿ ಪ್ರತಿ ಕಾರ್ಯಾಚರಣೆ ವೇಳೆ ವೆಂಕಟೇಶ್‌ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದರು.
Advertisement
ಹುಲಿ, ಚಿರತೆ, ಕರಡಿ ಸೆರೆ ಕಾರ್ಯಾಚರಣೆಯಲ್ಲಿ ವೆಂಕಟೇಶ್‌ರದ್ದೆ ಪ್ರಮುಖ ಪಾತ್ರ. ನರಹಂತಕ ಕಾಡಾನೆಗಳನ್ನು ಅರrವಳಿಕೆ ಚುಚ್ಚುಮದ್ದು ನೀಡಿ ಕೆಡವುತ್ತಿದ್ದರು. ಕಾಡಾನೆಗಳ ಸ್ಥಳಾಂತರ, ರೇಡಿಯೋ ಕಾಲರ್ ಅಳವಡಿಕೆಯಲ್ಲಿ ವೆಂಕಟೇಶ್ ಬಹುಮುಖ್ಯ ಪಾತ್ರ ವಹಿಸುತ್ತಿದ್ದರು.
Web Stories